ರಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ ಗೆದ್ದ ಪುಟ್ಟ ದೇಶ ರಿಕಾ

ಈ ಸುದ್ದಿಯನ್ನು ಶೇರ್ ಮಾಡಿ

Monica

ರಿಯೋ ಡಿ ಜನೈರೊ, ಆ.14- ಮಹಿಳೆಯರ ಸಿಂಗಲ್ಸ್ ಟೆನಿಸ್ ಫೈನಲ್‍ನಲ್ಲಿ ಅಚ್ಚರಿಯ ಗೆಲುವು ದಾಖಲಿಸುವ ಮೂಲಕ ಮೋನಿಕಾ ಪೂಯಿಗ್ ಫ್ಯುರ್ಟೊ ರಿಕಾ ದೇಶಕ್ಕೆ ಚೊಚ್ಚಲ ಒಲಂಪಿಕ್ ಚಿನ್ನ ಪದಕದ ಕೊಡುಗೆ ನೀಡಿದ್ದಾರೆ.  ಅಂತಿಮ ಪೈಪೋಟಿಯಲ್ಲಿ ಜರ್ಮನಿ ಪ್ರಬಲ ಆಟಗಾರ್ತಿ ಅಂಜೆಲಿಕ್ ಕೆರ್ಬೆಲ್ ಅವರನ್ನು 6-4, 4-6, 6-1ರಲ್ಲಿ ಮಣಿಸುವಲ್ಲಿ ಮೋನಿಕಾ ಸಫಲರಾದರು. ಒಲಿಂಪಿಕ್ ಇತಿಹಾಸದಲ್ಲಿ ಕೆರಿಬಿಯನ್ ದ್ವೀಪಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಪ್ರಪ್ರಥಮ ಮಹಿಳೆ ಎಂಬ ಚಾರಿತ್ರಿಕ ಹೆಗ್ಗಳಿಕೆಗೆ 22 ವರ್ಷದ ಮೋನಿಕಾ ಪೂಯಿಗ್ ಪಾತ್ರರಾಗಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin