ರಿಯೋ ಒಲಿಂಪಿಕ್ಸ್ ವರದಿಗೆ ತೆರಳಿದ್ದ ಪತ್ರಕರ್ತರ ಬಸ್ ಮೇಲೆ ಗುಂಡಿನ ದಾಳಿ
ಈ ಸುದ್ದಿಯನ್ನು ಶೇರ್ ಮಾಡಿ
ರಿಯೋ ಡಿ ಜನೈರೋ ಆ.10 : ರಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ವರದಿ ಮಾಡಲು ತೆರಳಿರುವ ಪತ್ರಕರ್ತರ ಬಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಾಸ್ಕೇಟ್ ಬಾಲ್ ಕ್ರೀಡಾಂಗಣದಿಂದ ಒಲಿಂಪಿಕ್ ಪಾರ್ಕ್ ನತ್ತ 12 ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ ಮೂವರು ಪತ್ರಕರ್ತರು ಗಾಯಗೊಂಡಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದಾಳಿಯಿಂದಾಗಿ ಬಸ್ ನ ಎರಡು ಕಿಟಕಿ ಗಾಜುಗಳು ಚೂರಾಗಿವೆ. ಈ ಘಟನೆಯಿಂದಾಗಿ ಒಲಿಂಪಿಕ್ಸ್ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 85 ಸಾವಿರ ಸೈನಿಕರು ಮತ್ತು ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.
Facebook Comments