ರಿಯೋ ಪ್ಯಾರಾಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಒಂದು ಚಿನ್ನ, ಒಂದು ಕಂಚು

ಈ ಸುದ್ದಿಯನ್ನು ಶೇರ್ ಮಾಡಿ

Para-olympics

ರಿಯೊ ಡಿ ಜನೈರೊ, ಸೆ. 10-ಬ್ರೆಜಿಲ್‍ನಲ್ಲಿ ನಡೆಯುತ್ತಿರುವ 15ನೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಪದಕ ಖಾತೆಯನ್ನು ತೆರೆದಿದೆ. ಪುರುಷರ ಟಿ42 ಹೈಜಂಪ್‍ನಲ್ಲಿ ಮರಿಯಪ್ಪನ್ ತಂಗವೇಲು ಚಿನ್ನದ ಪದಕ ಮತ್ತು ವರುಣ್ ಭಾಟಿ ಕಂಚು ಪದಕ ಗೆದ್ದಿದ್ದಾರೆ.   ರಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‍ನ ಎರಡನೇ ದಿನವಾದ ನಿನ್ನೆ ನಡೆದ ಹೈಜಂಪ್‍ನಲ್ಲಿ ಎರಡು ಪದಕಗಳನ್ನು ಗೆಲುವಿನ ಮೂಲಕ ಭಾರತ ಡಬಲ್ ಧಮಾಕ ಗೆಲುವಿನ ನಗೆ ಬೀರಿದೆ.  ತಂಗವೇಲು 1.89 ಎತ್ತರಕ್ಕೆ ಜಿಗಿದು ಬಂಗಾರದ ಪದಕ ಗೆದ್ದರೆ, ವರಣ್ 1.86 ಮೀಟರ್ ಲೀಪ್ ಸಾಧನೆಯೊಂದಿಗೆ ಕಂಚು ಪದಕ ಪಡೆದರು. ಅಮೆರಿಕದ ಸ್ಯಾಮ್ ಗ್ರೆವೆ ರಜತ ಪದಕವನ್ನು ತನ್ನದಾಗಿಸಿಕೊಂಡರು.

ಭಾರತದ ಅಥ್ಲೆಟ್‍ಗಳಿಗೆ ಈ ಗೆಲುವು ಸುಲಭವಾಗಿರಲಿಲ್ಲ. ಮೊದಲ ಎಂಟು ಯತ್ನಗಳಲ್ಲಿ ವಿಶ್ವದ 12 ಪಟುಗಳಲ್ಲಿ ಆರು ಮಂದಿ 1.74 ಮೀಟರ್ ಎತ್ತರದ ಗುರಿಯನ್ನು ಯಶಸ್ವಿಯಾಗಿ ಜಿಗಿದು ಫೈನಲ್ ಪ್ರವೇಶಿಸಿದ್ದರು. ತೀವ್ರ ಪೈಪೋಟಿಯ ಹೈಜಂಪ್‍ನಲ್ಲಿ ಭಾರತೀಯ ಇಬ್ಬರು ಪಟುಗಳು ಪದಕಗಳನ್ನು ಗಳಿಸಿ ಭಾರತಕ್ಕೆ ಶುಭಾರಂಭಕ್ಕೆ ಕಾರಣರಾಗಿದ್ದಾರೆ.

20 ವರ್ಷದ ಥಂಗವೇಲು ಪ್ರಸ್ತುತ ನಡೆಯುತ್ತಿರುವ ಪ್ಯಾರಾಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಥಂಗವೇಲು ಒಟ್ಟು ಇದುವರೆಗೆ ನಡೆದ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಸ್ವರ್ಣ ಪದಕ ಗೆದ್ದ ಮೂರನೇ ಭಾರತೀಯ ಪಟು ಆಗಿದ್ದು, ಈ ಹಿಂದೆ 1972ರಲ್ಲಿ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಮುರಳಿಕಾಂತ್ ಪೆಟ್ಕರ್ ಹಾಗೂ 2004ರಲ್ಲಿ ಈಜು ಸ್ಪರ್ಧೆಯಲ್ಲಿ ದೇವೇಂದ್ರ ಚಿನ್ನದ ಪದಕವನ್ನು ಗೆದ್ದಿದ್ದರು.  ಇನ್ನು, ಪ್ಯಾರಾ ಒಲಿಂಪಿಕ್ಸ್ ನ ಹೈಜಂಪ್‍ನಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆ ಕರ್ನಾಟಕದ ಗಿರೀಶ್ ಹೆಸರಿನಲ್ಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin