ರಿಲ್ಯಾಕ್ಸ್ ಮೂಡ್‍ನಲ್ಲಿ ದಸರಾ ಗಜಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Dasara-ERlephanrts--02

ಮೈಸೂರು, ಅ.1- ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಅರ್ಜುನ ಹಾಗೂ ಆತನ ಸಂಗಡಿಗರು ಇಂದು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಗಜಪಡೆ ಪ್ರತಿದಿನ ತಾಲೀಮು ನಡೆಸಿ ವಿಜಯದಶಮಿ ಮೆರವಣಿಗೆಗೆ ಅಭ್ಯಾಸ ನಡೆಸಿದ್ದವು.

ನಿನ್ನೆ ಅತ್ಯಂತ ಯಶಸ್ವಿಯಾಗಿ ಜಂಬೂಸವಾರಿ ನಡೆಯಲು ಗಜಪಡೆಯ ತಾಲೀಮು ಕಾರಣ.  ನಗರಕ್ಕೆ ಬಂದ ಆನೆಗಳಿಗೆ ನಗರದ ಜನರ ಗೌಜು-ಗದ್ದಲಗಳಿಗೆ ಹೊಂದಿಕೊಂಡು ಯಾವುದೇ ಶಬ್ದಕ್ಕೂ ಅಂಜದಂತೆ ತರಬೇತಿ ನೀಡಲಾಗಿತ್ತು. ಕ್ಯಾಪ್ಟನ್ ಅರ್ಜುನನಿಗೆ ಭಾರ ಹೊರುವ ತಾಲೀಮು ನೀಡಲಾಯಿತು. ಹಾಗಾಗಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿದ.

ದಸರಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಗಜಪಡೆ ಯಾವುದೇ ತಾಲೀಮು, ವಾಕಿಂಗ್ ಇಲ್ಲದೆ ಅರಮನೆಯಲ್ಲಿ ಹಾಕಲಾಗಿದ್ದ ವಸ್ತ್ರ, ಆಭರಣಗಳನ್ನು ತೆಗೆದು ಅರಮನೆ ಆವರಣದಲ್ಲಿನ ಕೊಳದಲ್ಲಿ ಸ್ನಾನ ಮಾಡಿಸಿ ಬಿಡಲಾಗಿದೆ. ಆನೆಗಳು ಸ್ವಚ್ಛಂದವಾಗಿ ಆಟವಾಡಿಕೊಂಡಿವೆ. ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಗಳು ಕೂಡ ರಿಲ್ಯಾಕ್ಸ್ ಮೂಡ್‍ನಲ್ಲಿದ್ದು, ಊರಿಗೆ ಹಿಂದಿರುಗಲು ಸಿದ್ಧತೆ ನಡೆಸಿದ್ದಾರೆ.

Facebook Comments

Sri Raghav

Admin