ರಿಸರ್ವ್ ಬ್ಯಾಂಕ್’ನಿಂದ ಬ್ಯಾಂಕುಗಳಿಗೆ 4 ಪಟ್ಟು ಹೆಚ್ಚು ಹಣ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

2000-Notes-000001

ನವದೆಹಲಿ, ಡಿ.1- ರಾಷ್ಟ್ರಾದ್ಯಂತ ಎದುರಾಗಿರುವ 500ರೂ. ನೋಟುಗಳ ಅಭಾವ ನೀಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅವುಗಳ ಪೂರೈಕೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ದೇಶದಲ್ಲಿರುವ ನಾಲ್ಕು ನೋಟು ಮುದ್ರಣಾಲಯಗಳಲ್ಲಿ ಎರಡು ಪಾಳಿಗೆ ಬದಲು ಮೂರು ಶಿಫ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿದೆ. ಮುದ್ರಣವಾದ ಕರೆನ್ಸಿಗಳನ್ನು ಕ್ಷಿಪ್ರವಾಗಿ ಸರಬರಾಜು ಕೇಂದ್ರಗಳಿಗೆ ತಲುಪಿಸಲು ನೋಟುಗಳನ್ನು ವಿಶೇಷ ವಿಮಾನಗಳ ಮೂಲಕ ರವಾನಿಸುವ ವಿಶೇಷ ಸೌಕರ್ಯ ಕಲ್ಪಿಸಿದೆ. ಪ್ರಸ್ತುತ ಆರ್‍ಬಿಐ ನೋಟು ಮುದ್ರಣಾಲಯಗಳಾದ ಮೈಸೂರು, ಸರ್‍ಬೋನಿ, ನಾಸಿಕ್ ಮತ್ತು ದೇವಾಸ್ ಪ್ರಿಂಟಿಂಗ್ ಯೂನಿಟ್‍ಗಳಲ್ಲೂ 500ರೂ. ಕರೆನ್ಸಿ ಮುದ್ರಣಕ್ಕೆ ಅನುಕೂಲ ಕಲ್ಪಿಸುವ ಆರ್‍ಬಿಐ ಅಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದೆ.

ಅಭಾವ : ದೇಶಾದ್ಯಂತ ಬ್ಯಾಂಕ್‍ಗಳು ಮತ್ತು ಎಟಿಎಂಗಳಲ್ಲಿ ಉಂಟಾಗಿರುವ ನೋಟುಗಳ ಕೊರತೆ ನೀಗಿಸಲು ಕರೆನ್ಸಿ ಮುದ್ರಣಗಳನ್ನು ಚುರುಕುಗೊಳಿಸಿದ್ದರೂ ಸಾರ್ವಜನಿಕರಿಗೆ ಪಡಿಪಾಟಲು ತಪ್ಪಿಲ್ಲ. ಬ್ಯಾಂಕ್‍ಗಳಲ್ಲಿ 2000ರೂ. ಹೊಸ ನೋಟುಗಳು ಲಭ್ಯವಿದ್ದರೂ 500ರೂ. ಮತ್ತು 100ರೂ.ಗಳ ಕೊರತೆಯಿಂದ ಗ್ರಾಹಕರ ಬೇಡಿಕೆ ಪೂರೈಸಲು ಹರಸಾಹಸ ಪಡಬೇಕಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin