ರಿಸೋರ್ಸ್ ಸ್ಯಾಟ್-2ಎ ಉಪಗ್ರಹ ಯಶಸ್ವಿ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

PSLV-C36

ಶ್ರೀಹರಿಕೋಟಾ. ಡಿ.7-ಅತ್ಯಾಧುನಿಕ ದೂರಸಂವೇದಿ ಉಪಗ್ರಹ ರಿಸೋರ್ಸ್ ಸ್ಯಾಟ್-2ಎಯನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮತ್ತೊಂದು ಸಾಧನೆಯ ಮೈಲಿಗಲ್ಲು ಸ್ಥಾಪಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ-ಸಿ 36 ರಾಕೆಟ್ ಮೂಲಕ ಇಂದು ಬೆಳಿಗ್ಗೆ ಈ ಸಂಪನ್ಮೂಲ ಸಂವೇದಿ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಲಾಗಿದೆ.  1235 ಕೆ.ಜಿ. ತೂಕದ ರಿಸೋರ್ಸ್ ಸ್ಯಾಟ್-2ಎ ಉಪಗ್ರಹವನ್ನು ಪಿಎಸ್‍ಎಲ್‍ವಿ-ಸಿ 36 ರಾಕೆಟ್ 817 ಕಿ.ಮೀ.ದೂರದಲ್ಲಿರುವ ಧ್ರುವೀಯ ಸೂರ್ಯ ಸ್ಥಾಯಿ ಕಕ್ಷೆಗೆ ಸೇರಿಲಿದೆ. ಸುಮಾರು ಐದು ವರ್ಷಗಳ ತನಕ ಇದು ಕಾರ್ಯನಿರ್ವಹಿಸಲಿದೆ.

ಈ ಉಪಗ್ರಹದ ಒಳಗೆ ಮೂರು ಪ್ರಮುಖ ಪೇಲೋಡ್‍ಗಳಿವೆ. ಅವುಗಳೆಂದರೆ ಹೈ ರೆಸಲ್ಯೂಷನ್ ಕ್ಯಾಮೆರಾ, ಮೀಡಿಯಂ ರೆಸಲ್ಯೂಷನ್ ಕ್ಯಾಮೆರಾ ಮತ್ತು ಸುಧಾರಿತ ವೈಡ್ ಫೀಲ್ಡ್ ಸೆನ್ಸಾರ್ ಕ್ಯಾಮೆರಾ. ರಿಸೋರ್ಸ್‍ಸ್ಯಾಟ್-1 ಮತ್ತು ರಿಸೋರ್ಸ್ ಸ್ಯಾಟ್-2 ಉಪಗ್ರಹಗಳನ್ನು ಕ್ರಮವಾಗಿ 2003 ಮತ್ತು 2011ರಲ್ಲಿ ಉಡ್ಡಯನ ಮಾಡಲಾಗಿತ್ತು. ಈ ಉಪಗ್ರಹಗಳಿಂದ ವಿಶ್ವದ ವಿವಿಧ ರಾಷ್ಟ್ರಗಳಿಗೆ ಅಗತ್ಯ ಮಾಹಿತಿಗಳ ಸೇವೆಯನ್ನು ನೀಡಲಾಗುತ್ತಿದೆ. ಈಗ ಉಡಾವಣೆಯಾಗಿರುವ ರಿಸೋರ್ಸ್ ಸ್ಯಾಟ್-2ಎ ಸೇವೆಗಳನ್ನು ಆಯಾ ದೇಶಗಳಿಗೆ ಮುಂದುವರಿಯಲಿದೆ ಎಂದು ವಿಜ್ಞಾಗಳು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin