ರೀಲಲ್ಲಷ್ಟೇ ಅಲ್ಲ ರಿಯಲ್ ಲೈಫಲ್ಲೂ ಅಕ್ಷಯ್ ಕುಮಾರ್ ಹೀರೋ..!

ಈ ಸುದ್ದಿಯನ್ನು ಶೇರ್ ಮಾಡಿ

Akshay-Kumar--01

ಅಕ್ಷಯ್ ಕುಮಾರ್-ಬಾಲಿವುಡ್‍ನ ಆಕ್ಷನ್ ಕಿಂಗ್. ಈ ನಟ ಕಟ್ಟುಮಸ್ತಾದರೂ ನೊಂದವರಿಗಾಗಿ ಮಿಡಿಯುವ ಈತನ ಹೃದಯ ಮೃದು. ಈ ಹಿಂದೆ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡಿದ್ದ ಈ ಕರುಣಾಮಯಿ ಈಗ ಅದೇ ರೀತಿಯ ಮಹತ್ಕಾರ್ಯವನ್ನು ಪುನರಾವರ್ತನೆ ಮಾಡಲಿದ್ದಾನೆ. ಹುತಾತ್ಮ ಯೋಧರ 12 ಕುಟುಂಬ ಗಳಿಗೆ ತಲಾ 9 ಲಕ್ಷ ರೂ.ಗಳಂತೆ 1.08 ಕೋಟಿ ರೂ.ಗಳ ನೆರವನ್ನು ಅಕ್ಷಯ್ ನೀಡಿದ್ದಾನೆ.  ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ವೇಳೆ ಮತ್ತು ಎನ್‍ಕೌಂಟರ್‍ಗಳಲ್ಲಿ ದೇಶರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಬಿಎಸ್‍ಎಫ್ ಯೋಧರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ಅಕ್ಷಯ್ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದ.

ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾ.11ರಂದು ನಕ್ಸಲ್ ದಾಳಿಗೆ ಬಲಿಯಾದ ಸಿಆರ್‍ಪಿಎಫ್‍ನ 12 ಹುತಾತ್ಮ ಯೋಧರ ಕುಟುಂಬಗಳಿಗೆ ಅಕ್ಕಿ ತಲಾ 9 ಲಕ್ಷ ರೂ.ಗಳಂತೆ 1.08 ಕೋಟಿ ರೂ.ಗಳ ಧನ ಸಹಾಯ ನೀಡಿದ್ದಾನೆ.   ಈತ ಯೋಧರಿಗೆ ನೆರವು ನೀಡುವುದರಲ್ಲಿ ಸದಾ ಮುಂದು. ಅಲ್ಲದೇ ನಾಗರಿಕ ಪ್ರಾಣ ಉಳಿಸಲು ನೆರವಾಗುವ ಪೊಲೀಸ್ ಸಿಬ್ಬಂದಿಗೂ ಈತ ಪ್ರೊತ್ಸಾಹ ಧನ ನೀಡುತ್ತಾನೆ. ಕೆಲವು ದಿನಗಳ ಹಿಂದೆ ಹುತಾತ್ಮನಾದ ಬಿಎಸ್‍ಎಫ್ ಯೋಧನೊಬ್ಬನ ಕುಟುಂಬಕ್ಕೆ 9 ಲಕ್ಷ ರೂ.ಗಳ ನೆರವು ನೀಡಿದ್ದ. ಹುತಾತ್ಮರ ಬಗ್ಗೆ ಅಕ್ಷಯ್‍ಗೆ ಇರುವ ಕಾಳಜಿ ಶ್ಲಾಘನೀಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin