ರುವಾಂಡಾದಲ್ಲಿ ಬಂಧಿತ 11 ಹಕ್ಕಿಪಿಕ್ಕಿ ಜನರ ಬಿಡುಗಡೆಗೆ ಸರ್ಕಾರ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Hakki-Pikki--News

ಬೆಂಗಳೂರು. ಅ.9-ದಕ್ಷಿಣ ಆಫ್ರಿಕಾದ ರುವಾಂಡದಲ್ಲಿ ಗಿಡಮೂಲಿಕೆಗಳ ಮಾರಾಟಕ್ಕೆ ಹೋಗಿ ಬಂಧಿತರಾಗಿರುವ ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಜನಾಂಗದ 11 ಜನರ ಸುರಕ್ಷಿತ ಬಿಡುಗಡೆಗಾಗಿ ರಾಜ್ಯ ಗೃಹ ಸಚಿವಾಲಯ ನಡೆಸಿದ ಪ್ರಯತ್ನ ಸಫಲವಾಗಿದೆ. ಹಕ್ಕಿಪಿಕ್ಕಿ ಜನಾಂಗದವರ ಬಂಧನದ ವಿಷಯ ತಿಳಿಯುತ್ತಲೇ, ತಕ್ಷಣ ಕಾರ್ಯಪ್ರವೃತ್ತರಾದ ಗೃಹ ಸಚಿವ ಆರ್.ರಾಮಲಿಂಗಾ ರೆಡ್ಡಿಯವರು, ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದರು. ಅವರ ಸುರಕ್ಷಿತ ಬಿಡುಗಡೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್‍ಚಂದ್ರ ಹಾಗೂ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ ಅವರಿಗೆ ಆದೇಶ ನೀಡಿದ್ದರು.

ಈ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ರುವಾಂಡಾದ ರಾಯಭಾರಿ ಕಚೇರಿಗಳ ಜೊತೆ ಸಂಪರ್ಕ ಹೊಂದಿದ್ದು, ಅವರ ಬಿಡುಗಡೆಗಾಗಿ ಪೂರಕ ಕ್ರಮಗಳನ್ನು ಕೈಗೊಂಡಿದ್ದ ಪ್ರಯತ್ನಗಳು ಸಫಲವಾಗಿವೆ.  ರುವಾಂಡಾ ಪೊಲೀಸರು ಅವರ ಬಿಡುಗಡೆಗೆ ಸಮ್ಮತಿಸಿದ್ದು, ರಾಜ್ಯಕ್ಕೆ ಕರೆತರುವ ಪ್ರಕ್ರಿಯೆ ನಡೆದಿದೆ. ವಿಮಾನ ಟಿಕೆಟ್ ವ್ಯವಸ್ಥೆ ಆದ ಮರುಕ್ಷಣವೇ, ಪಾಸ್‍ ಪೋರ್ಟ್‍ಗಳನ್ನು ನೀಡಿ ಅವರನ್ನು ತವರೂರಿಗೆ ಕರೆ ತರಲಾಗುವುದು.

Facebook Comments

Sri Raghav

Admin