‘ರೂಪದರ್ಶಿ ಆಗೋಕೆ ನೀನು ದಪ್ಪ ಇದ್ದೀಯಾ..!?
ಈ ಸುದ್ದಿಯನ್ನು ಶೇರ್ ಮಾಡಿ
‘ನೀನು ರೂಪದರ್ಶಿ ಆಗೋಕೆ ದಪ್ಪ ಇದ್ದೀಯಾ…’ ಎಂದು ನನ್ನ ವೃತ್ತಿ ಜೀವನದ ಆರಂಭದಲ್ಲಿ ನನ್ನನ್ನು ಕಡೆಗಣಿಸಲಾಗಿತ್ತು ಎಂಬುದಾಗಿ ತನ್ನ ಗತಕಾಲದ ಸನ್ನಿವೇಶವನ್ನು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ನೆನಪಿಸಿಕೊಂಡಿದ್ದಾಳೆ. ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ರ್ಯಾಂಪ್ ಮೇಲೆ ಕ್ಯಾಟ್ವಾಕ್ ಒನವು-ವಯ್ಯಾರ ತೋರಿಸಿ ಸೈ ಅನಿಸಿಕೊಂಡ ಸನ್ನಿಗೆ ಮೂದಲಿಕೆಯ ಅನುಭವವಾಗಿತ್ತಂತೆ.ಅದು ಆರಂಭದ ದಿನಗಳು. ನಾನು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಲು ಅವಕಾಶ ಕೋರಿದಾಗ ಸಂಘಟಕರು ನೀನು ರೂಪದರ್ಶಿ ಆಗೋಕೆ ತುಂಬ ಫ್ಯಾಟ್ ಇದ್ದೀಯ ಎಂದು ಹೇಳಿದ್ದರಂತೆ ಎಂದು ಸನ್ನಿ ತಿಳಿಸಿದ್ದಾಳೆ. ಈಗ ಅತ್ಯಂತ ಪ್ರತಿಷ್ಠಿತ ನ್ಯೂಯಾರ್ಕ್ ಫ್ಯಾಷನ್ ಶೋನಲ್ಲಿ ಸ್ಥಾನ ಪಡೆದ ಪ್ರಪ್ರಥಮ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಲಿಯೋನ್ ಪಾತ್ರಳಾಗಿದ್ದಾಳೆ. ಅದಕ್ಕೇ ಹೇಳೋದು ಕಾಲಾಯ ತಸ್ಮೈ ನಮಃ.
► Follow us on – Facebook / Twitter / Google+
Facebook Comments