ರೆಡ್ಡಿ ಪುತ್ರಿಯ ಮದುವೆಯ ಆಹ್ವಾನ ಪತ್ರಿಕೆ ವಿಚಾರದಲ್ಲಿ ರಾಜಕೀಯ ಬೆರಸಬೇಡಿ : ಶ್ರೀರಾಮುಲು

ಈ ಸುದ್ದಿಯನ್ನು ಶೇರ್ ಮಾಡಿ

Sriramulu-01

ತುಮಕೂರು,ಅ.30-ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ಮದುವೆಯ ಆಹ್ವಾನ ಪತ್ರಿಕೆ ವಿಚಾರದಲ್ಲಿ ರಾಜಕೀಯ ಬೆರಸಬೇಡಿ. ಇದರಿಂದ ಆಕೆಯ ವೈವಾಹಿಕ ಜೀವನದ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಂಸದ ಮತ್ತು ರೆಡ್ಡಿ ಪರಮಾಪ್ತ ಬಿ. ಶ್ರೀರಾಮುಲು ಮನವಿ ಮಾಡಿದ್ದಾರೆ.  ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಮದುವೆ ಆಹ್ವಾನ ಪತ್ರಿಕೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಮಗಳ ಮದುವೆಯ ಆಹ್ವಾನ ಪತ್ರಿಕೆ ಬಗ್ಗೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದೆ. ಈ ಬಗ್ಗೆ ಚರ್ಚೆ ಮಾಡದಂತೆ ಮಾಧ್ಯಮದವರಲ್ಲಿ ಕೋರಿದರು.

ಮದುವೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಹೀಗಾಗಿ ಯಾರೊಬ್ಬರು ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಮಾಧ್ಯಮದವರು ಇದನ್ನೇ ಹೈಲೇಟ್ ಮಾಡಿಕೊಂಡು ಜನರಲ್ಲಿ ಗೊಂದಲ ಮೂಡಿಸಬಾರದು ಎಂದರು.  ಈಗಾಗಲೇ ಸಾಕಷ್ಟು ನೋವು ಅನುಭವಿಸಿ ಹೊರಬಂದಿರುವ ಜನಾರ್ದನ ರೆಡ್ಡಿ ತಮ್ಮ ಪುತ್ರಿಯ ಮದುವೆ ಮೂಲಕ ಸಂತೋಷ ಕಾಣಲು ಹೊರಟಿದ್ದಾರೆ ಎಂದು ಹೇಳಿದರು.  ಬಳ್ಳಾರಿಗೆ ಹೋಗದಂತೆ ಕೋರ್ಟ್ ಆದೇಶಿಸಿರುವುದರಿಂದ ಜನಾರ್ದನ ರೆಡ್ಡಿ ಅವರು ಸಂಬಂಧಿಕರಿಗೆ, ಸ್ನೇಹಿತರಿಗೆ ಹಾಗೂ ರಾಜಕೀಯ ಮುಖಂಡರಿಗೆ ಎಲ್‍ಸಿಡಿ ಮೂಲಕ ಮದುವೆಗೆ ಆಹ್ವಾನಿಸಿದ್ದಾರೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಇದನ್ನು ತಿರುಚಿ ರಾಜಕೀಯ ಮಾಡಬೇಡಿ ಎಂದರು.ಇದೇ ವೇಳೆ ಶ್ರೀಗಳಿಗೆ ಆಹ್ವಾನ ಪತ್ರಿಕೆಯ ಎಲ್‍ಸಿಡಿ ತೆರೆದು ತೋರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin