ರೆಡ್‍ರಿಬ್ಬನ್ ಕ್ಲಬ್ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

1

ಗದಗ,ಫೆ.18- ಸಮಾಜದಲ್ಲಿ ಹೆಚ್.ಐ.ವಿ. ಸೋಂಕನ್ನು ಸೊನ್ನಗೆ ತರುವಲ್ಲಿ ಸಮುದಾಯದವರು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೈಜೋಡಿಸಬೇಕು. ಬರೀ ಆರೋಗ್ಯ ಇಲಾಖೆಯವರ ಜವಾಬ್ದಾರಿ ಅಷ್ಟೇ ಅಲ್ಲದೇ ಎಲ್ಲ ಇಲಾಖೆಯವರು ಸೋಂಕಿನ ಬಗ್ಗೆ ತಿಳಿದುಕೊಂಡು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಗೌಡರ ಹೇಳಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಬಸವೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರೆಡ್ ರಿಬ್ಬನ್ ಕ್ಲಬ್ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ಜರುಗಿತು.

ಪ್ರಾಚಾರ್ಯರ ಎಮ್.ಎಮ್. ಬುರಡಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ತರಬೇತಿ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ತರಬೇತಿ ಕಾರ್ಯಾಗಾರದಲ್ಲಿ ಎಲ್‍ಸಿಡಿ ಧ್ವನಿ ಚಿತ್ರದ ವಿವರಣೆ ನೀಡುವ ಮೂಲಕ ಹೆಚ್‍ಐವಿ ಸೋಂಕಿನ ಮಾಹಿತಿ ನೀಡಿ, ಈ ಸೋಂಕು ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲ ಯುವಕರು ಮುಂದೆ ಬರಬೇಕು, ಯುವಕರು ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ರಕ್ತದಾನ ಮಾಡುವ ಮೂಲಕ ಮಾದರಿ ಯುವಕರಾಗಿ ರೂಪಗೊಳ್ಳುವಂತೆ ಉಪನ್ಯಾಸ ನೀಡಿದರು. ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ ಮಾತನಾಡಿ ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರದ ಕುರಿತು ಉಪನ್ಯಾಸ ನೀಡಿದರು. ಎ.ಕೆ. ಬಾಗವಾನ ಹೆಚ್‍ಐವಿ ಸೋಂಕಿತರಿಗೆ ಸೀಗುವ ಸೇವಾ ಸೌಲಭ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೆ.ವಿ. ಬಾಗಲಕೋಟಿ, ಮುಲ್ಲಾ, ವೀಣಾ ತಿರ್ಲಾಪೂರ, ಪಾಟೀಲ, ಉಪನ್ಯಾಸಕರು, ಇಲಾಖೆಯ ಮಲ್ಲಿಕಾರ್ಜುನ ವಿರಾಪೂರ, ಸಮಿತ್ರಾ ಮಾವಿನಕಾಯಿ, ರವಿ ಪತ್ತಾರ ಜೀವನಸಾಬ ಬಿನ್ನಾಳ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin