ರೆನ್ನೆಸ್ : ಬಾರ್‍ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 13 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

DASGSDGSDG

ರೆನ್ನೆಸ್, ಆ.6- ಉತ್ತರ ಫ್ರಾನ್ಸ್ ನ ರೊಯಿನ್‍ನ ಬಾರೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಟ 13 ಮಂದಿ ಸಾವಿಗೀಡಾಗಿದ್ದು, ಆರು ಜನ ತೀವ್ರ ಗಾಯಗೊಂಡಿದ್ದಾರೆ.  ನಗರದ ಮಧ್ಯಭಾಗದಲ್ಲಿರುವ ಕ್ಯೂಬಾ ಲಿಬೆರ್ ಬಾರ್‍ನ ನೆಲಮಾಳಿಗೆ ಕೊಠಡಿಯಲ್ಲಿ ಮಧ್ಯರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಿತು. ಈ ದುರಂತದಲ್ಲಿ ಕನಿಷ್ಠ 13 ಮಂದಿ ಮೃತರಾದರು ಎಂದು ಒಳಾಡಳಿತ ಸಚಿವ ಬರ್ನಾಡ್ ಕ್ಯಾಜೆನ್ನೋವ್ ತಿಳಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ನಂದಿಸಲು 50ಕ್ಕೂ ಹೆಚ್ಚು ಸಿಬ್ಬಂದಿ ಶ್ರಮಿಸಿದರು. ಬರ್ತ್‍ಡೇ ಕೇಕ್ ಮೇಲಿದ್ದ ಮೇಣದ ಬತ್ತಿಗಳು ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.  ದುರಂತದಲ್ಲಿ ಗಾಯಗೊಂಡಿರುವ ಆರು ಜನರ ಸ್ಥಿತಿ ಚಿಂತಾಜನಕವಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin