ರೆಬಲ್‍ಸ್ಟಾರ್ ಅಂಬಿಗೆ ಇಂದು 66 ನೇ ಹುಟ್ಟುಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Ambarish--01

ಬೆಂಗಳೂರು, ಮೇ 29-ರೆಬಲ್‍ಸ್ಟಾರ್ ಅಂಬರೀಶ್ ಅವರು ತಮ್ಮ 66ನೆ ಹುಟ್ಟುಹಬ್ಬವನ್ನು ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಜತೆ ಅದ್ಧೂರಿಯಾಗಿ ಆಚರಿಸಿಕೊಂಡರು. ಜೆಪಿ ನಗರದ ನಿವಾಸದ ಬಳಿ ಅಂಬರೀಶ್ ಅಭಿಮಾನಿಗಳು ರಾತ್ರಿಯಿಂದಲೇ ತಮ್ಮ ನೆಚ್ಚಿನ ನಟನನ್ನು ನೋಡಿ ಹುಟ್ಟುಹಬ್ಬದ ಶುಭಾಶಯ ಕೋರಲು ಜಮಾಯಿಸಿದ್ದರು. ಅಂಬಿ ಮನೆಯ ಸುತ್ತಮುತ್ತ ಅಂಬಿಯ ಕಟೌಟ್‍ಗಳು, ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಮಗ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಮುಹೂರ್ತ ಸಮಾರಂಭ ನಿನ್ನೆಯಷ್ಟೆ ಮುಗಿದಿದ್ದು, ಈಗ 66ನೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಂಬರೀಶ್ ಮತ್ತು ಕುಟುಂಬವರ್ಗದವರು ಇದ್ದಾರೆ.

ಇದೇ ವೇಳೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿತು. ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ ನಿರ್ದೇಶಕ ಯೋಗರಾಜ್‍ಭಟ್ ವಿಶೇಷ ಗೀತೆಯನ್ನು ರಚನೆ ಮಾಡಿದ್ದಾರೆ.

Facebook Comments

Sri Raghav

Admin