ರೇಖೆಗಳಿಗೆ ಜೀವ ತುಂಬುವ ಕಲಾವಿದ

ಈ ಸುದ್ದಿಯನ್ನು ಶೇರ್ ಮಾಡಿ

nayak

ಕೈಯಲ್ಲಿ ಲೇಖನಿ ಹಿಡಿದರೆ ಸಾಕು ಒಂದು ಕ್ಷಣದಲ್ಲಿ ಶಿಷ್ಟ ಕಲಾ ಲೋಕಕ್ಕೆ ಅಡಿಟ್ಟ ಅನುಭವ ಆಗುವುದಂತೂ ಸತ್ಯ. ಅಂತಹ ಒಂದು ಕಲಾ ತಾಣದ ಪರಿಚಯ ನಮಗಾಗುತ್ತದೆ. ಕಲಾದನಾದವನಿಗೆ ಯಾವುದು ಕೂಡ ಕಷ್ಟವಲ್ಲ. ಆಲೋಚನೆ, ಗ್ರಕೆ, ಗುರಿ ಇದ್ದರೆ ಸಾಕು. ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಒಂದು ಸೋಜಿಗವನ್ನು ಅನಾವರಣಗೊಳಿಸುತ್ತಾರೆ. ಗೆ ರೇಖೆಗಳಿಂದ ಮೋಡಿ ಮಾಡಿ ಭಿನ್ನ ಕಲಾಕೃತಿಗಳ ಗುಚ್ಚವನ್ನು ಕಲಾಸಕ್ತರ ಮಡಿಲಿಗೆ ಅರ್ಪಿಸಿದವರು ಬಾಬುಜತ್ತಕರ.  ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರು. ಈಗ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಮಹಾದ್ಯಾಲಯದಲ್ಲಿ ಅನ್ವಯ ಕಲಾಭಾಗದಲ್ಲಿ ಕಲಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾ ಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ನೋಡುಗರಿಗೆ ನೂತನ ಅನುಭವ ನೀಡುವುದರ ಜೊತೆಗೆ ನಮ್ಮನ್ನು ಸ್ಮಯಚಕಿತರನ್ನಾಗಿ ಮಾಡಿ ಒಂದು ಸ್ಥಳದ ಸ್ಥೂಲವಾದ ಷಯವನ್ನು ಪರಿಚುಸುವಂತೆ ಕಾಣುತ್ತದೆ. ಅಂತಹ ಕಲಾಕೃತಿಗಳ ಪ್ರದರ್ಶನ ಇತ್ತೀಚಿಗಷ್ಟೆ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಅನಾವರಣಗೊಂಡಿದೆ.

ಇವರ ಕಲಾ ಕೃತಿಯನ್ನು ಕ್ಷಿಸಿದವರಿಗೆ ಬೇರೆ ಕಲಾಕೃತಿಗಳಂತೆ ಗೋಚರವಾಗುವುದಿಲ್ಲ. ಇವರ ಕಲಾ ಕೃತಿಗಳಲ್ಲಿ ನೈಜತೆಯ ಜೊತೆಗೆ ನಮ್ಮ ಜೀವನಕ್ಕೆ ಹತ್ತಿರವಾದ ಸನ್ನಿವೇಶಗಳನ್ನು ಅನಾವರಣ ಮಾಡಿರುವುದು ಶೇಷ. ಇವರ ಕಲಾಕೃತಿಗಳಲ್ಲಿ ಚುಕ್ಕೆ ಅಥವಾ ರೇಖೆಗಳನ್ನು ಬಳಸಿ ಮರ, ಪ್ರಕೃತಿ, ಗುಡ್ಡಗಾಡು ಪ್ರದೇಶ, ಬೆಟ್ಟ, ಜಲಪಾತ, ದೇವಾಲಯ, ಕೋಟೆ ಕೊತ್ತಲಗಳು, ಗಗಳು, ಇನ್ನಿತರ ಷಯಗಳನ್ನು ರೇಖೆಗಳಲ್ಲಿ ಚಿತ್ರಿಸಿ ಕಲಾಸಕ್ತರ ಮಡಿಲಿಗೆ ಅರ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಲಾವಿದ ಮತ್ತು ಪ್ರಕೃತಿಗೆ ಹೆಚ್ಚಿನ ನಂಟು. ಕಲಾದನಿಗೆ ಪ್ರಕೃತಿಯು ಎಷ್ಟು ಸೂರ್ತಿಯಾಗಬಲ್ಲದು ಎಂಬುದನ್ನು ಈ ಕಲಾಕೃತಿಗಳಲ್ಲಿ ಕ್ಷಿಸಬಹುದು. ಇವರ ಹೆಚ್ಚಿನ ಕಲಾಕೃತಿಗಳನ್ನು ಕ್ಷಿಸಿದರೆ ಕಪ್ಪು ಮತ್ತು ಬಿಳುಪು ಮಾಧ್ಯಮ, ಪೆನ್‌ಡಾಂಗ್‌ನಲ್ಲಿ ಚಿಕ್ಕಗೆರೆಗಳನ್ನು ಜೋಡಿಸಿ ಪ್ರಕೃತಿಯ ಸೌಂದರ್ಯವನ್ನು ಅಚ್ಚುಕಟ್ಟಾಗಿ ತಲುಪಲು ಚ್ಯುತಿಬಾರದಂತೆ ಚಿತ್ರಿಸಿರುವುದು ಶೇಷ. ಚುಕ್ಕೆಗಳಲ್ಲಿಯು ಕಲಾದ ಮನಸ್ಸು ಮಾಡಿದರೆ ಒಂದು ಅದ್ಬುತ ಕಲಾಕೃತಿಗಳ ತಾಣವೊಂದನ್ನು ರಚಿಸಬಹುದು ಎಂಬುದಕ್ಕೆ ಈ ಕಲಾಕೃತಿಗಳೇ ಉದಾಹರಣೆ.

ಇವರ ಕಲಾಕೃತಿಗಳಿಗೆ ಪ್ರೇರಣೆ ಯಾರೆಂದು ಕೇಳಿದರೆ ಕಲಾದರಾದ .ಜಿ.ಅಂಧಾನಿ, ಚಂದ್ರನಾಥ್ ಆಚಾರ್ಯ, ಎಂ.ಬಿ.ಪಾಟೀಲ್ ಅವರ ಒಡನಾಟ ಮತ್ತು ಇವರ ಕಲಾಕೃತಿಗಳಿಂದ ಪ್ರೇರೇಪಿತರಾದ ಇವರು ಒಂದು ರೀತಿಯ ಜನಮಾನಸದಲ್ಲಿರುವ ಕಲಾಕೃತಿಗಳನ್ನು ನೀಡಲು ಸಾಧ್ಯವಾತೆಂದು ಹೇಳುತ್ತಾರೆ. ಚಿತ್ರಕಲಾ ಪರಿಷತ್‌ನಲ್ಲಿ ಓದುತ್ತಿರುವಾಗ ಪ್ರೊ.ನಂಜುಂಡರಾವ್, ಪ್ರೊ.ಕಮಲಾಕ್ಷಿ, ಪ್ರೊ.ಅಪ್ಪಾಜಯ್ಯರವರ ಮಾರ್ಗದರ್ಶನದಲ್ಲಿ ಕಲಿತಿದ್ದರೂ ಕೂಡಾ ಒಂದು ಅದ್ಭುತ ಕಲಾಕಾರನಾಗಿ ಹೊರಹೊಮ್ಮಲು ಸಾಧ್ಯವಾತು ಎಂದು ಹೇಳುತ್ತಾರೆ. ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಕಲಾಕೃತಿಗಳ ಪ್ರದರ್ಶನ ಮಾಡಿದ್ದು, ಜನಮೆಚ್ಚುಗೆ ಗಳಿಸಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಮಹಾರಾಷ್ಟ್ರ ಅದರ ಜೊತೆಗೆ ಚಿತ್ರಸಂತೆಗಳಲ್ಲಿ ಇವರ ಕಲೆಯು ಪ್ರದರ್ಶನಗೊಂಡಿದೆ. ಇವರ ಕಲಾಕೃತಿಗಳಿಂದ ಪ್ರೇರೇಪಿತರಾದ ದ್ಯಾರ್ಥಿ ಸಮೂಹ ಇಂದು ಇದೇ ಶೈಲಿಯಲ್ಲಿಯೇ ಅನೇಕ ಕಲಾಕೃತಿಗಳ ರಚನೆಯಲ್ಲಿ ಯಶಸ್ಸು ಕಂಡುಕೊಳ್ಳುತ್ತಿದ್ದಾರೆ. ಒಬೊಬ್ಬ ಕಲಾದರ ಆಲೋಚನೆ ಭಿನ್ನವಾಗಿರುವಂತೆ ಇವರ ಕಲ್ಪನೆ ಭಾವನೆಗಳೆಲ್ಲ ಕಲಾಕೃತಿಗಳಲ್ಲಿ ಮೂಡಿದೆ.
– ಬಳಕೂರು..ಎಸ್.ನಾಯಕ್

► Follow us on –  Facebook / Twitter  / Google+

Facebook Comments

Sri Raghav

Admin