ರೇಡ್ ಮಾಡಲು ಬಂದರೆ ಐಟಿ ಅಧಿಕಾರಿಗಳನ್ನು ಹೂಗುಚ್ಛ ನೀಡಿ ಬರಮಾಡಿಕೊಳ್ಳುತ್ತೇನೆ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

M.B.Patil

ಬೆಂಗಳೂರು, ಮೇ 24-ನಾನು, ಸಚಿವರಾದ ಜಾರ್ಜ್ ಸೇರಿದಂತೆ ಹಲವರ ಮೇಲೆ ಐಟಿ ರೈಡ್ ಮಾಡುವ ಷಡ್ಯಂತ್ರ ನಡೆದಿದೆ. ಇದರಿಂದ ನಾವೇನೂ ಭೀತಿಗೊಳಗಾಗುವುದಿಲ್ಲ. ಐಟಿ ಅಧಿಕಾರಿಗಳನ್ನು ನಾನು ಹೂಗುಚ್ಛ ನೀಡಿ ಬರಮಾಡಿಕೊಳ್ಳುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಹೇಳಿದರು.  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಂತಾದವರನ್ನು ಇಂದು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇ ಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸಲಾಗುತ್ತಿದೆ. ನನ್ನ ಮೇಲೆ ಐಟಿ ರೈಡ್ ನಡೆಯಲಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ತಿಳಿದುಬಂದಿದೆ. ನನ್ನ ಮೇಲಷ್ಟೆ ಅಲ್ಲ, ಸಚಿವ ಜಾರ್ಜ್ ಸೇರಿದಂತೆ ಹಲವರ ಮೇಲೆ ತಂತ್ರ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.ಕೇವಲ ಅಬ್ಬರ: ಉತ್ತರ ಪ್ರದೇಶದಂತೆ ಕರ್ನಾಟಕವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿಗೆ ಸಾಧ್ಯವೇ ಇಲ್ಲ. ಬಿಜೆಪಿಯ ಮಿಷನ್ 150 ಅಹಂಕಾರದ ಮಾತು. ಚುನಾವಣೆ ವರ್ಷದಲ್ಲಿ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುವುದು ಸಹಜ. ನಮ್ಮ ಹೈಕಮಾಂಡ್ ಬಿಜೆಪಿಗೆ ಪ್ರತಿಯಾಗಿ ರಣನೀತಿ ರೂಪಿಸುತ್ತಿದೆ. ಪಕ್ಷದ ಪ್ರಮುಖ ನಾಯಕರ ಜೊತೆ ಈಗಾಗಲೇ ಚರ್ಚಿ ನಡೆಸುತ್ತಿದೆ. ರಾಜ್ಯದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ಮಿಷನ್ 150 ಅಹಂಕಾರದ ಮಾತಾಗಿದ್ದು, ಜನರೇನೂ ಇವರ ಗುಲಾಮರಲ್ಲ. ಇವರದ್ದು ಕೇವಲ ಅಬ್ಬರವೇ ಹೊರತು ಬೇರೇನೂ ಅಲ್ಲ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಯಡಿಯೂರಪ್ಪ ಆರೋಪ ತಳ್ಳಿ ಹಾಕಿದ ಎಂ.ಬಿ.ಪಾಟೀಲ್ : 

ಬೆಂಗಳೂರು, ಮೇ 24-ಮಲಪ್ರಭಾ-ಘಟಪ್ರಭಾ ಕಾಲುವೆ ಆಧುನೀಕರಣದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಳ್ಳಿ ಹಾಕಿದ್ದಾರೆ.  ಕುಮಾರಕೃಪಾದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ತಿರುಗೇಟು ನೀಡಿದ್ದಾರೆ. ನಾಲಾ ಆಧುನೀಕರಣದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಅವರ ಆರೋಪ ಸತ್ಯಕ್ಕೆ ದೂರವಾದ ವಿಷಯ ಎಂದು ಹೇಳಿದ್ದಾರೆ.

ಜಿಂದಾಲ್ ಕಂಪೆನಿಗೆ 7 ಟಿಎಂಸಿ ಡೆಡ್ ಸ್ಟೋರೇಜ್ ನೀರು ಬಿಡಲು ಸಾಧ್ಯವೇ? ಒಂದು ಟಿಎಂಸಿ ನೀರು ಎಷ್ಟು ಎನ್ನುವುದನ್ನು ಮೊದಲು ಯಡಿಯೂರಪ್ಪನವರು ಅರಿತುಕೊಳ್ಳಲಿ. ಬೇಕಾದರೆ ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಬಳಿ ಟಿಎಂಸಿ ಬಗ್ಗೆ ತಿಳಿದುಕೊಳ್ಳಲಿ. ಅನಗತ್ಯ ಆರೋಪ ಮಾಡುವುದನ್ನು ಕೈಬಿಡಲಿ ಎಂದು ಹೇಳಿದರು.  ಬಿಜೆಪಿಯವರು ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು. ಡೆಡ್‍ಸ್ಟೋರೇಜ್‍ನಿಂದ ಇಷ್ಟು ಪ್ರಮಾಣದ ನೀರು ಬಿಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin