ರೇಪಿಸ್ಟ್ ಬಾಬಾನ ಡೇರಾ ಸಚ್ಚಾ ಸೌಧದಲ್ಲಿ ಅಕ್ರಮ ಸ್ಫೋಟಕ ತಯಾರಿಕೆ ಕಾರ್ಖಾನೆ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Dera-Saccha-Soudha

ಸಿರ್ಸಾ(ಹರಿಯಾಣ), ಸೆ.9-ಜೈಲು ಪಾಲಾಗಿರುವ ರೇಪಿಸ್ಟ್ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್ ನೇತೃತ್ವದ ಡೇರಾ ಸಚ್ಚಾ ಸೌಧ (ಡಿಎಸ್‍ಎಸ್) ಆಸ್ತಿ ಮುಟ್ಟುಗೋಲು ಆದೇಶದ ಹಿನ್ನೆಲೆಯಲ್ಲಿ ಭದ್ರತಾಪಡೆಗಳ ಶೋಧ ಕಾರ್ಯಾಚರಣೆ ಇಂದು ಮತ್ತಷ್ಟು ತೀವ್ರಗೊಂಡಿದೆ. 800 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಆಶ್ರಮದ ಅನೇಕ ಅಕ್ರಮ-ಅವ್ಯವಹಾರಗಳ ನಿನ್ನೆ ಬಯಲಾದ ಬೆನ್ನಲ್ಲೇ ಎರಡನೇ ದಿನದ ಶೋಧದಲ್ಲಿ ಕಾನೂನುಬಾಹಿರ ಪಟಾಕಿ ತಯಾರಿಕೆ ಕಾರ್ಖಾನೆಯೊಂದು ಪತ್ತೆಯಾಗಿದೆ. ಸ್ಫೋಟಕಗಳನ್ನು ತಯಾರಿಸಲು ಈ ಘಟಕವನ್ನು ಬಳಸಲಾಗುತ್ತಿತ್ತು.

ಅರೆ ಸೇನಾಪಡೆ, ಪೊಲೀಸರು, ಸರ್ಕಾರದ ಅಧಿಕಾರಿಗಳು ಮತ್ತು ತಂತ್ರಜ್ಞರ ದೊಡ್ಡ ಪಡೆ ಡಿಎಸ್‍ಎಸ್ ಶೋಧ ಕಾರ್ಯವನ್ನು ಚುರುಕುಗೊಳಿಸಿವೆ. ನಿನ್ನೆ ಈ ಆಶ್ರಮದ ಕೊಠಡಿಗಳಿಂದ ಕಂಪ್ಯೂಟರ್‍ಗಳು, ಹಾರ್ಡ್ ಡಿಸ್ಕ್‍ಗಳು ಮತ್ತು ಅಪಾರ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ರಹಸ್ಯ ಕೋಣೆಯೊಂದರಲ್ಲಿ ಅಸ್ತಿಪಂಜರದ ಆವಶೇಷಗಳೂ ಕಂಡುಬಂದಿತ್ತು.  ಈ ಮಧ್ಯೆ ಬಾಬಾ ನಿರ್ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಚಂಡಿಗಢದ ಪಂಚಕುಲದಲ್ಲಿ ಭಾರೀ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಡಿಎ¸ಎಸ್‍ನ ಇಬ್ಬರು ಉನ್ನತ ಅನುಯಾಯಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ರಮದ ಮೇಲ್ವಿಚಾರಕ ಚಮ್‍ಕೌರ್ ಸಿಂಗ್ ಮತ್ತು ಮತ್ತೊಬ್ಬ ಹಿರಿಯ ಕಾರ್ಯಕರ್ತ ಧಾನ್ ಅವರನ್ನು ಬಂಧಿಸಲಾಗಿದೆ ಎಂದು ಪಂಚಕುಲ ಡಿಸಿಪಿ ಮುನೀರ್ ಸಿಂಗ್ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin