ರೇಪ್ ಮಾಡಿ ನಂತರ ಕಲ್ಲು ಎತ್ತಿ ಹಾಕಿ 3 ವರ್ಷದ ಹೆಣ್ಣು ಮಗು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Girl-Rape--02

ಬೆಂಗಳೂರು, ಫೆ.27-ಮನೆಯ ಬಳಿ ಆಟವಾಡುತ್ತಿದ್ದ 3 ವರ್ಷದ ಹೆಣ್ಣು ಮಗುವನ್ನು ಪುಸಲಾಯಿಸಿ ಕರೆದೊಯ್ದ ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿ ಮಗುವಿನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಉತ್ತರ ಪ್ರದೇಶದ ಗೋರಖ್‍ಪುರ ಮೂಲದ ಸುಖೇಶ್-ಸರಿತಾದೇವಿ ದಂಪತಿ ಪುತ್ರಿ ಅಂಕಿತಾ (3) ಕೊಲೆಯಾಗಿರುವ ಮಗು. ಮಗುವಿನ ತಂದೆಯ ಪರಿಚಯದವನೇ ಆದ ಸೋನು ನಿಶದ್ (28) ಎಂಬಾತ ನಿನ್ನೆ ಸಂಜೆ ಮನೆ ಬಳಿ ಮಗು ಆಟವಾಡುತ್ತಿದ್ದಾಗ ಚಾಕೊಲೆಟ್ ಕೊಡಿಸುವುದಾಗಿ ಹೇಳಿ ಭೈರತಿ ಕ್ರಾಸ್ ಬಳಿ ಕರೆದೊಯ್ದು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕಲ್ಲು ಎತ್ತಿ ಹಾಕಿ ಸಾಯಿಸಿ ಪರಾರಿಯಾಗಿದ್ದ.

ಈ ಸಂಬಂಧ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಪುಟ್ಟ ಕಂದನ ಮೇಲೆ ಈ ರೀತಿ ಕೃತ್ಯ ನಡೆದಿರುವುದು ಅಮಾನವೀಯವಾಗಿದ್ದು, ಅಪರಾಧಿಯನ್ನು ಗಲ್ಲಿಗೇರಿಸಬೇಕೆಂದು ಸ್ಥಳೀಯರು ಕಿಡಿಕಾರಿದ್ದಾರೆ.

Facebook Comments

Sri Raghav

Admin