“ರೇಪ್ ರಾಜಧಾನಿ” ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

delhi

ನವದೆಹಲಿ, ಸೆ.16- ಓರ್ವ ಅಪ್ರಾಪ್ತೆ ಸೇರಿದಂತೆ ಇಬ್ಬರು ಬಾಲೆಯರ ಮೇಲೆ ಅವರ ಗೆಳೆಯರ ಎದುರಿನಲ್ಲೇ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೆಹಲಿಯ ಅಮನ್ ವಿಹಾರ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ. ದೆಹಲಿ ಹೊರವಲಯದ ಅಮನ್ ವಿಹಾರ ಪ್ರದೇಶದ ಮುಂಡ್ಕ ಮೆಟ್ರೋ ಸ್ಟೇಷನ್ ಬಳಿ ನಿನ್ನೆ ರಾತ್ರಿ 8.30ರಲ್ಲಿ ಈ ಕೃತ್ಯ ನಡೆದಿದೆ ಎಂದು ಹಿರಿಯ ಪೊಲೀಸ್ ಅಕಾರಿಯೊಬ್ಬರು ಹೇಳಿದ್ದಾರೆ. ಈ ಬಾಲೆಯರು ತಮ್ಮ ಗೆಳೆಯರ ಜೊತೆ ರಾತ್ರಿ ವಾಯುವಿಹಾರಕ್ಕೆ ತೆರಳಿದ್ದರು. ಈ ಪ್ರದೇಶದ ನಿರ್ಜನ ಸ್ಥಳದಲ್ಲಿ ತಮ್ಮ ಗೆಳೆಯರೊಂದಿಗೆ ಬಾಲೆಯರು ಸರಸಸಲ್ಲಾಪದಲ್ಲಿ ತೊಡಗಿದ್ದನ್ನು ನೋಡಿದ ಐವರ ಯುವಕರು ಅವರನ್ನು ಥಳಿಸಿ ತಮ್ಮ ವಶಕ್ಕೆ ತೆಗೆದುಕೊಂಡರು.

ನಂತರ 17 ಮತ್ತು 18 ವರ್ಷದ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಇವರ ಮೇಲೆ ಗ್ಯಾಂಗ್‌ರೇಪ್ ನಡೆದಿರುವುದು ಮೃತಪಟ್ಟಿದೆ. ಐವರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಸಿದ್ದಾರೆ. ಅಮನ್ ವಿಹಾರ್ ಪ್ರದೇಶವು ಮಹಿಳೆಯರಿಗೆ ಸುರಕ್ಷಿತವಲ್ಲ. 2014ರಲ್ಲಿ ಇಲ್ಲಿ 40ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ. ದೆಹಲಿಯಲ್ಲಿ ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಗ್ಯಾಂಗ್ ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿ ಪಡೆಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin