ರೇಷ್ಮೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

MALAVALI

ಮಳವಳ್ಳಿ, ಮಾ.3- ರೇಷ್ಮೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಬ್ಬುಲ್ ಸಲಾಮ್ ಸಾದಾಬ್(28) ರಾಮನಗರ ನಿವಾಸಿ, ಸೈಯದ್ ಮುಜಾಹಿದ್(33)ರಾಮನಗರ ನಿವಾಸಿ, ಸೈಯದ್ ರೂಮನ್(27) ರಾಮನಗರ ಸಲ್ಮಾನ ಖಾನ್(24) ಪೊಲೀಸರ ವಶದಲ್ಲಿದ್ದಾರೆ.ರೇಷ್ಮೆ ವ್ಯಾಪಾರಿ ನಯಾಜ್ ಪಾಷ ಕೊಳ್ಳೇಗಾಲಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ಬೆಳಕವಾಡಿ ಪೊಲೀಸ ಠಾಣೆ ವ್ಯಾಪ್ತಿ ಸಲಾಂ ಬೋರೆಯ ಹತ್ತಿರ ಬೈಕ್ ಅಡ್ಡಗಟ್ಟಿದ ಐದು ಮಂದಿ ಲಾಂಗ್‍ನಿಂದ ಹಲ್ಲೆ ನಡೆಸಿ ಜೇಜಿನಲ್ಲಿ ನಗದು ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದರು.ಈ ಸಂಬಂಧ ನಯಾಜ್ ಪಾಷ ದೊರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರಾದ ಸುಧೀರ್‍ಕುಮಾರ ರೆಡ್ಡಿ ಅಪರ ಪೊಲೀಸ್ ಅಧೀಕ್ಷಕರಾದ ಸವಿತಾ ಹಾಗೂ ಮಳವಳ್ಳಿ ಡಿವೈಎಸ್‍ಪಿ ಮ್ಯಾಥ್ಯೂಸ್ ಥಾಮಸ್ ಮಾರ್ಗದರ್ಶನದಲ್ಲಿ ಕಾರ್ಯಾಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಾಮಾಂತರ ಠಾಣೆಯ ಸಿಪಿಐ ಶ್ರೀಕಾಂತ ಪಿಎಸ್‍ಐರವರು ನೇತೃತ್ವದಲ್ಲಿ ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯ ನಡೆಸಿದ್ದಾರೆ.ಆರೋಪಿಗಳ ವಿಚಾರಣೆ ವೇಳೆ ಅವರು ಮಾಡಿದ ಕೃತ್ಯ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 2 ಬೈಕ್, ಮೊಬೈಲ್‍ಗಳನ್ನು ವಶಪಡಿಸಿಕೊಂಡು ರಾಮನಗರದ ಮತ್ತೊಬ್ಬ ಆರೋಪಿ ಮುಹಿಬ್ ತಲೆಮರೆಸಿಕೊಂಡಿದ್ದು ಇವನ ಬಂಧನದ ಪತ್ತೆ ಕಾರ್ಯ ನಡೆಯುತ್ತಿದೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin