ರೈತನ ಜಮೀನಿನಲ್ಲಿ ಹರಿದ ನೋಟುಗಳ ರಾಶಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Manya-Notes

ಮಂಡ್ಯ,ಅ.7-ರೈತರೊಬ್ಬರ ಜಮೀನಿನಲ್ಲಿ ರಾಶಿ ರಾಶಿ ಕತ್ತರಸಿದ ನೋಟುಗಳು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲೆಯ ರಾಗಿಮುದ್ದನಹಳ್ಳಿ ಗ್ರಾಮದ ನಿಂಗೇಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ತುಂಡು ತುಂಡಾದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಅಚ್ಚರಿ ರೀತಿಯಲ್ಲಿ ನೋಡುತ್ತಿದ್ದಾರೆ.

ಅಮಾನೀಕರಣಗೊಂಡ ನೋಟುಗಳಾಗಿದ್ದರೆ ಯಾರೋ ಹಣದ ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆಂದು ಹೇಳಬಹುದಾಗಿತ್ತು. ಆದರೆ 100 ರೂ. ಮುಖಬೆಲೆಯ ನೋಟುಗಳನ್ನು ಯಾರು ಹೀಗೆ ಬಿಸಾಕಿರಬಹುದು ಎಂಬ ಕುತೂಹಲ ಎಲ್ಲರದ್ದು.   ಎರಡರಿಂದ ಮೂರು ಮೂಟೆಗಳಷ್ಟು ಚಲಾವಣೆ ನೋಟುಗಳು ಹರಿದ ರೀತಿಯಲ್ಲಿ ಪತ್ತೆಯಾಗಿದ್ದು , ಈ ಕೃತ್ಯ ಯಾರದಿರಬಹುದು, ಏತಕ್ಕಾಗಿ ಹೀಗೆ ಚಲಾವಣೆ ನೋಟುಗಳನ್ನು ರೈತರ ಜಮೀನಿನಲ್ಲಿ ತಂದು ಬಿಸಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin