ರೈತನ ಮಾರ್ಗದರ್ಶನಕ್ಕೆ ಬೇಕು ಮಾಹಿತಿ ಕಾರ್ಯಕ್ರಮಗಳು

ಈ ಸುದ್ದಿಯನ್ನು ಶೇರ್ ಮಾಡಿ

SRINIVASPURA

ಶ್ರೀನಿವಾಸಪುರ, ಸೆ.28- ರೈತರು ಈ ದೇಶದ ಬೆನ್ನಲುಬು.ಆತ ಹಗಲಿರಲು ಶ್ರಮಿಸಿ ನಮಗೆ ಆಹಾರ ಧಾನ್ಯಗಳನ್ನು ನೀಡುವ ಶ್ರಮಜೀವಿ. ಇಂತಹ ರೈತನಿಗೆ ಕೃಷಿ ದರ್ಶನದ ಮೂಲಕ ಎಲ್ಲಾ ರೀತಿಯ ಮಾಹಿತಿಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದ್ವಾರಸಂದ್ರ ಮುನಿವೆಂಕಟಪ್ಪ ತಿಳಿಸಿದರು. ಶೆಟ್ಟಿಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿವಿ, ಚಿಂತಾಮಣಿ ರೇಷ್ಮೆ ಕೃಷಿ ವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಿಂದ ಕೃಷಿ ದರ್ಶನ ಹಾಗೂ ಕೃಷಿ ವಸ್ತು ಪ್ರದರ್ಶನದ ಮೂಲಕ ರೈತರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಎಲ್ಲಾ ರೈತರಿಗೂ ಇಂತಹ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರೆ ರೈತರು ಇನ್ನಷ್ಟು ಆರ್ಥಿಕವಾಗಿ ಅಭಿವೃದ್ದಿ ಹೊಂದಬಹುದು. ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಲು ನಮ್ಮ ಸಹಕಾರವಿದೆ ಎಂದು ತಿಳಿಸಿದರು. ಸಾವಯುವ ಕೃಷಿ ಒಕ್ಕೂಟದ ಅಧ್ಯಕ್ಷ ಕೆ.ವಿ.ರೆಡ್ಡಪ್ಪ ಮಾತನಾಡಿ, ವಿದೇಶಗಳಲ್ಲಿ ನಮ್ಮ ದೇಶದ ಕೃಷಿ ಬೆಳೆಗಳಿಗೆ ಬೇಡಿಕೆ ಕುಂದಿದೆ ಅಲ್ಲದೆ ನಮ್ಮ ಧಾನ್ಯಗಳನ್ನು ತಿರಸ್ಕರಿಸುತ್ತಿದ್ದಾರೆ. ಕಾರಣ ನಮ್ಮ ದೇಶದಲ್ಲಿ ಅತಿ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಬಳಸಿ ಕೃಷಿ ಮಾಡುತ್ತಿದ್ದೇವೆ. ವಿದೇಶದಲ್ಲಿ 1 ಕೆಜಿ ರಾಗಿ ಬೆಲೆ 600 ರೂಪಾಯಿಗಳಿದ್ದು ನಮ್ಮ ದೇಶದಲ್ಲಿ ಒಂದು ಕ್ವಿಂಟಾಲ್ ಬೆಲೆ 2000 ರೂಪಾಯಿಗಳು ಇದೆ. ಮಾವನ್ನು ಸಹ ವಿದೇಶದಲ್ಲಿ ತಿರಸ್ಕರಿಸಲಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ವಿ.ಶ್ರೀನಿವಾಸ್ ಮಾತನಾಡಿ, ರೈತರು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.ಶೆಟ್ಟಿಹಳ್ಳಿಯ ಕಸಬಾ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ತಿಮ್ಮರಾಯಪ್ಪ, ವಿದ್ಯಾಲಯದ ಪ್ರಾಧ್ಯಾಪಕರಾದ ಶಂಕರ್‍ನಾಯಕ್ (ಡೀನ್),ಗೋಲ್ಯನಾಯಕ್, ಆಂಜಿನಾಯಕ್, ರಾಮಕೃಷ್ಣ ನಾಯಕ್, ಸೀನಪ್ಪ, ಪಾಪಿರೆಡ್ಡಿ, ದ್ರೋಣಾಚಾರ್ಯ ಮಾನವಿ, ಜೈವಿಕ ಇಂಧನ ಪ್ರಾಧ್ಯಾಪಕ ವೆಂಕಟೇಶಪ್ಪ, ಶ್ರೀನಿವಾಸರೆಡ್ಡಿ, ಲಕ್ಷ್ಮೀಪತಿ, ವಿನೋದಮ್ಮ, ಸವಿತ, ಜಗದೀಶಗೌಡ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin