ರೈತರಿಗಾಗಿ ಇರುವ ಏಕೈಕ ಸಂಸ್ಥೆ ಇಪ್ಕೋ : ಅವಸ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಫೆ.5-ರೈತರಿಂದ ರೈತರಿಗೋಸ್ಕರ ಇರುವ ಏಕೈಕ ಸಹಕಾರಿ ಗೊಬ್ಬರ ಸಂಸ್ಥೆ ಇಇಪ್ಕೋ (ಐಎಫ್‍ಎಫ್‍ಸಿಒ) ಸಂಸ್ಥೆ ತನ್ನ ಷೇರುದಾರರಿಗೆ ದೇಶದಲ್ಲೇ ಅತಿ ಹೆಚ್ಚಿನ ಅಂದರೆ ಶೇ.20ರಷ್ಟು ಡಿವಿಡೆಂಡ್ ನೀಡುತ್ತಿದ್ದು , ಇದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಎಸ್. ಅವಸ್ಥಿ ತಿಳಿಸಿದರು. ಇಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಭವನದಲ್ಲಿ ಆಯೋಜಿಸಿದ್ದ ಸಂಸ್ಥೆಯ 50ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, 50 ವರ್ಷಗಳ ಹಿಂದೆ ಕೇವಲ 56 ಸಹಕಾರಿ ಸಂಘಗಳ ಸದಸ್ಯತ್ವ ಮತ್ತು ಆರು ಲಕ್ಷ ರೂ. ಬಂಡವಾಳದೊಂದಿಗೆ ಆರಂಭವಾದ ಇಪ್ಕೋ  ಸಂಸ್ಥೆ ಈಗ 426 ಕೋಟಿ ಬಂಡವಾಳ ಮತ್ತು 35,214 ಸದಸ್ಯರನ್ನು ಹೊಂದಿದೆ ಎಂದರು.  ಪ್ರಸ್ತುತ ಸಂಸ್ಥೆಯು 86.52 ಲಕ್ಷ ಟನ್ ಗೊಬ್ಬರ ಉತ್ಪಾದಿಸುತ್ತಿದ್ದು, ಇದನ್ನು ಮುಂದಿನ ವರ್ಷದ ವೇಳೆಗೆ 100 ಲಕ್ಷ ಟನ್‍ಗೆ ಏರಿಸುವ ಗುರಿ ಹೊಂದಲಾಗಿದೆ ಎಂದರು.

ಇಪ್ಕೋ  ಟೊಕಿಯೋ ಜನರಲ್ ಇನ್ಷೂರೆನ್ಸ್ ಕಂಪನಿ ಅಧ್ಯಕ್ಷ ಮತ್ತು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಹರೀಶ್, ಸಿಇಒ ರಾಮಕೃಷ್ಣ ಗೌಡ, ಉಪನಿಬಂಧಕ ಎಚ್.ಪಿ.ಕುಮಾರ್, ಸಿ.ಎಸ್.ಪಾಟೀಲ್ ಮತ್ತಿತರರು ಭಾಗವಹಿಸಿದ್ದರು. 9 ಜಿಲ್ಲೆಗಳ ಸಹಕಾರ ಸಂಘಗಳ ನಿರ್ದೇಶಕರು, ಮುಖ್ಯ ಅಧಿಕಾರಿಗಳು, ಸಹಕಾರಿ ಧುರೀಣರು, ರೈತರು ಪಾಲ್ಗೊಂಡಿದ್ದರು. ಪಿ.ಎಲ್.ರಘು ಕಾರ್ಯಕ್ರಮ ನಿರ್ವಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin