ರೈತರಿಗೆ ಕಣ್ಣೀರು ತರಿಸಿರುವ ಈರುಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

onion

ಹಿರಿಯೂರು, ಅ.18-ಶ್ರಮಪಟ್ಟು ಈರುಳ್ಳಿ ಬೆಳೆದ ರೈತರು ಬೆಳೆ ನಷ್ಟವಾಗಿರುವುದರಿಂದ ಕಣ್ಣೀರು ಹಾಕುವಂತಾಗಿದೆ. ತಾಲ್ಲೂಕಿನ ರೈತರು 5 ರಿಂದ 10ಸಾವಿರ ಚೀಲ ಈರುಳ್ಳಿ ಬೆಳೆದರೂ ಏನು ಪ್ರಯೋಜನವಾಗಿಲ್ಲ. ಹಾಕಿರುವ ಬಂಡವಾಳ ಸಹ ಕೈಗೆ ಸಿಗುವುದಿಲ್ಲ ಎಂದು ಆತಂಕಕ್ಕೊಳಗಾಗಿದ್ದಾರೆ.ಸಾಲಸೋಲ ಮಾಡಿ ಈರುಳ್ಳಿ ಬೆಳೆ ಹಾಕಿ 400ಅಡಿಯಿಂದ 800 ಅಡಿವರೆಗೂ ಬೋರ್‍ವೆಲ್ ಕೊರೆಸಿದರೂ ನೀರು ಸಿಗದೆ ಹೇಗೋ ಕಷ್ಟಪಟ್ಟು ನೀರು ತಂದು ಫಸಲು ಪಡೆದರೂ ಅದಕ್ಕೆ ತಕ್ಕ ಬೆಲೆ ಸಿಗದೆ ರೈತರು ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ.
ರೈತರು ಬೆಳೆದ ಸಂದರ್ಭದಲ್ಲಿ ನಿಗದಿತಬೆಲೆ ಸಿಗುವುದಿಲ್ಲ ಮತ್ತು ಸರ್ಕಾರ ರೈತರ ಬಗ್ಗೆ ಕಾಳಜಿವಹಿಸುವುದಿಲ್ಲ ಎಂದು ಕಣ್ಣೀರು ಸುರಿಸುತ್ತಿರುವ. ನಾವು ಮಾಡಿರುವ ಸಾಲಕ್ಕೆ ಬ್ಯಾಂಕು ಬಡ್ಡಿ ಕಟ್ಟುವುದು ಕಷ್ಟವಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಅಗತ್ಯವಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin