ರೈತರಿಗೆ ಪಾಲಿಹೌಸ್ ಅತ್ಯಗತ್ಯ : ಕೃಷ್ಣಬೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಆ.9-ರೈತರು ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್ ನಿರ್ಮಿಸಿಕೊಂಡು ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆದು ಹೆಚ್ಚು ಅದಾಯ ಗಳಿಸಬಹುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಸಲಹೆ ಮಾಡಿದರು.ತಾಲೂಕಿನ ತಾಳಕೆರೆ ಗ್ರಾಮದಲ್ಲಿನ ರೈತ ಅಶೋಕ್ ಬೆರಿಕೆರಿ ಕೃಷಿ ಬಾಗ್ಯ ಯೋಜನೆಯಲ್ಲಿ ನಿರ್ಮಿಸಿರುವ ಪಾಲಿಹೌಸ್ ಹಾಗೂ ಕೃಷಿ ಹೊಂಡ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರ ಕೃಷಿ ಭಾಗ್ಯ ಯೋಜನೆಯ ಮೂಲಕ ರೈತರಿಗೆ ಕೃಷಿ ಹೊಂಡ, ಪಾಲಿಹೌಸ್ ನಿರ್ಮಾಣಕ್ಕೆ ಹಣವನ್ನು ನೀಡುತ್ತಿದೆ. ಪಾಲಿಹೌಸ್ ರೈತರಿಗೆ ಹೆಚ್ಚು ಅವಶ್ಯಕವಾಗಿದೆ.

 

ಟೊಮ್ಯಾಟೋ, ದಪ್ಪಮೆಣಸಿನಕಾಯಿ, ಹೂಗಳನ್ನು ಬೆಳೆದು ಮಾರಾಟ ಮಾಡಿ ಹೆಚ್ಚು ಅದಾಯ ಗಳಿಸಬಹುದು ಎಂದರು.ಕೃಷಿ ಸಚಿವರು ರೈತ ಅಶೋಕ್ ಬೆರಿಕೆರಿ ಪಾಲಿ ಹೌಸ್‍ನಲ್ಲಿ ಬೆಳೆದಿದ್ದ ಜರ್ಬೆರ ಹೂ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು ರೈತನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಯಣ್, ತಾಲೂಕು ಪಂಚಾಯ್ತಿ ಸದಸ್ಯರಾದ ನೆಂಜೇಗೌಡ, ಮಹಾಲಿಂಗಯ್ಯ, ಸ್ವಾಮಿ, ಮುಖಂಡರಾದ ಗೀತಾರಾಜಣ್ಣ, ಚೌದ್ರಿ ರಂಗಪ್ಪ, ಎನ್.ಆರ್ ಜಯರಾಮ್, ಕಾಂತರಾಜ್ ಅರಸು, ಕೃಷಿ ಸಹಾಯಕ ನಿದೇಶಕ ಹನುಮಂತರಾಯಪ್ಪ ಸೇರಿದಂತೆ ಅಧಿಕಾರಿಗಳು ಇದ್ದರು.

Facebook Comments

Sri Raghav

Admin