ರೈತರು ಚಳವಳಿ ಮಾಡದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

 

tumakuru-3

ತುಮಕೂರು,ಆ.15- ರೈತರು ತಮ್ಮ ಸಮಸ್ಯೆ ವಿರೋಧಿಸಿ ಚಳುವಳಿ ಮಾಡದಿದ್ದರೆ ಸರಕಾರ ಎಚ್ಚೇತ್ತುಕೊಳ್ಳುವುದಿಲ್ಲ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಹೆಬ್ಬೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ರೈತ ಭವನ ಶಂಕುಸ್ಥಾಪನೆ ಮತ್ತು ಬೃಹತ್ ನೇತ್ರಾ ಚಿಕಿತ್ಸಾ ಶಿಬಿರ ಹಾಗೂ ಅಡಿಕೆ ಮತ್ತು ಕೊಬ್ಬರಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಲು ಹಮ್ಮಿಕೊಂಡಿರುವ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿ 127 ಕೋಟಿ ಜನರಿಗೆ ಅನ್ನ ನೀಡಿ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರಿಗೆ ಆಹಾರ ಒದಗಿಸುತ್ತಿರುವ ದೇಶದ ರೈತರ ಸ್ಥಿತಿ ಚಿಂತಜನಕವಾಗಿದೆ. ದೇಶದಲ್ಲಿ ಕೈಗಾರಿಕೆ,ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ವಿನಹ ಬೆಳೆ ಬೆಳೆದು ಕೋಟ್ಯಾಂತರ ಜನರ ಹಸಿವು ನೀಗಿಸುತ್ತಿರುವ ರೈತರಿಗೆ ಮಾತ್ರ ದ್ರೋಹ ಮಾಡುತ್ತಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಂತೂ ಸರಕಾರ ಗೊಂದಲಗಳನ್ನು ಸೃಷ್ಠಿ ಮಾಡಿದೆ. ಕೇವಲ ಹಣದ ದಾಹವನ್ನು ಹೊಂದ್ದಿದ್ದಾರೆಯೇ ವಿನಹ ರಾಜ್ಯದ ಹಾಗೂ ಮನುಷ್ಯನ ಆರೋಗ್ಯಕ್ಕೆ ಬೇಕಿರುವ ಆಹಾರವನ್ನು ಬೆಳೆಸುವಲ್ಲಿ ಮುಂದೆ ಬರುತ್ತಿಲ್ಲ, ಮನುಷ್ಯ ವಿಷಯುಕ್ತ ಆಹಾರವನ್ನು ತಿಂದು ಇಡೀ ದೇಹವನ್ನು ವಿಷದ ದೇಹವನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ಮನುಷ್ಯ ವಿಷಯುಕ್ತ ಆಹಾರವನ್ನು ತಿಂದು ಅನೇಕ ಕಾಯಿಲೆಗಳನ್ನು ತನ್ನ ದೇಹಕ್ಕೆ ತಂದುಕೊಳ್ಳುತ್ತಿದ್ದಾನೆ ಎಂದು ಹೇಳಿದರು.

ಸರಕಾರಗಳು ರೈತರ ಬಗ್ಗೆ ಕಿಂಚಿತ್ತು ಯೋಚನೆಗಳನ್ನು ಮಾಡುತ್ತಿಲ್ಲ. ಯಾವುದಾದರೂ ಸರಕಾರಿ ಇಲಾಖೆಗಳ ನೌಕರರು ಮುಷ್ಕರ ಮಾಡಿ ಹೋರಾಟ ಮಾಡಿದರೆ ಎರಡು ಮೂರು ದಿನಗಳ ಒಳಗೆ ಅವರ ಸಂಬಳವನ್ನು ಹೆಚ್ಚು ಮಾಡುತ್ತಾರೆ. ಆದರೆ ಲಕ್ಷಾಂತರ ಸಾಲ ಮಾಡಿ ಬೆಳೆ ಬೆಳೆದು ಬೆಂಬಲ ಬೆಲೆ ಸಿಗದೆ ಅಪಾರವಾದ ನಷ್ಟವನ್ನುಹೊಂದುತ್ತಿರುವ ರೈತರ ಪಾಲಿಗೆ ಸರಕಾರಗಳು ಸತ್ತಂತಿವೆ ಎಂದು ದೂರಿದರು.  ಬೆಂಗಳೂರಿನ ವಿದ್ಯಾವಾಚಸ್ಪತಿ ಆಯುರ್ವೇದಾಚಾರ್ಯ ಶ್ರೀ ವಿಶ್ವಸಂತೋಷ ಭಾರತೀ ಶ್ರೀ ಪಾದರು ಮಾತನಾಡಿ ಹಣವಂತರ ನಡುವಿನ ಸಂಬಂಧ ಕಳಚಿಕೊಳ್ಳುತ್ತಿದೆ.

ಎಲ್ಲಿ ದುಡ್ಡಿರುತ್ತದೆಯೋ ಅಲ್ಲಿ ಸಂಬಂಧಗಳು ಬಲಿಯಾಗುತ್ತಿವೆ.ಇಂದಿಗೂ ರೈತರಲ್ಲಿ ಬಾಂದವ್ಯಗಳು ಉಳಿದಿವೆ ಎಂದರೆ ರೈತರಲ್ಲಿ ಹಣವಿಲ್ಲ ಎಂದರ್ಥ, ಇತ್ತೀಚಿನ ದಿನಗಳಲ್ಲಿ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಮನುಷ್ಯ ಉತ್ತಮ ಆಹಾರ ಸೇವಿಸದ ಕಾರಣ ಮನುಷ್ಯ ಹೆಚ್ಚು ದಿನಗಳ ಕಾಲ ಬುದುಕುಳಿಯಲು ಸಾಧ್ಯವಾಗದಂತಿದೆ ಎಂದರು.ಶ್ರೀ ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಧರ್ಮದರ್ಶಿಗಳಾದ ಪಾಪಣ್ಣ, ಕ.ರಾ.ರೈ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಗೌರವಾಧ್ಯಕ್ಷ ಚಿರತೆ ಚಿಕ್ಕಣ್ಣ, ಅಧ್ಯಕ್ಷ ಚಿಕ್ಕಬೊರೇಗೌಡ,ತಿಮ್ಮೇಗೌಡ, ಮೂಡಲಗಿರಿಯಪ್ಪ, ಜಿ.ಪಂ ಸದಸ್ಯ ರಾಜೇಗೌಡ,ತಾ.ಪಂ ಸದಸ್ಯ ರಂಗಸ್ವಾಮಯ್ಯ, ಗ್ರಾ.ಪಂ ಅಧ್ಯಕ್ಷೆ ಮಂಜುಳ ಹಾಗೂ ಇತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin