ರೈತರ ಆತ್ಮಹತ್ಯೆಗೆ ಕಾರಣವಾಗುವ ಸರ್ಕಾರಗಳಿಗೆ ಶಿಕ್ಷೆಯಾಗಲಿ : ಶಿವಸೇನೆ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

Shivasene

ಮುಂಬೈ, ಏ.4- ಗೋ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಎಂದಾದಲ್ಲಿ, ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣವಾಗುವ ಸರ್ಕಾರಗಳನ್ನೂ ಕೊಲೆ ಆರೋಪದಡಿ ಶಿಕ್ಷಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.  ಗೋ ಹತ್ಯೆ ಮಾಡುವವರನ್ನು ಉಗ್ರವಾಗಿ ಶಿಕ್ಷಿಸುವ ಕಾನೂನನ್ನು ಅನುಷ್ಠಾನಗೊಳಿಸಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ಕ್ರಮದ ಬಗ್ಗೆ ಶಿವಸೇನೆ ಅಣಕವಾಡಿದೆ. ಗೋ ಹತ್ಯೆ ಮಾಡಿದವರಿಗೆ ಮರಣದಂಡನೆ ಬಗ್ಗೆ ಚರ್ಚೆಯಾಗುತ್ತಿದೆ. ದೇಶದ ಬೆನ್ನೆಲುಬಾದ ಅನ್ನದಾತ ರೈತರ ಆತ್ಮಹತ್ಯೆಗಳಿಗೆ ಕಾರಣವಾದ ಸರ್ಕಾರಕ್ಕೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.

ಗೋವಿನಂತೆಯೇ ರೈತರಿಗೂ ಬದುಕುವ ಹಕ್ಕಿದೆ. ಗೋವುಗಳ ರೀತಿಯಲ್ಲೇ ರೈತರ ರಕ್ಷಣೆಗೆ ಸರ್ಕಾರ ಆದ್ಯ ಗಮನ ನೀಡಬೇಕು ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಲಾಗಿದೆ.   ಹಿಂದುತ್ವದ ಪರವಾಗಿರುವ ಕೇಂದ್ರ ಸರ್ಕಾರ ಅಧಿಕಾರದಲ್ಲಿದ್ದರೂ, ಭಾರತವು ವಿಶ್ವದ ಅಗ್ರ ಮಾಂಸ ರಫ್ತುದಾರ ದೇಶಗಳ ಪಟ್ಟಿಯಲ್ಲಿ ಹೇಗೆ ಸ್ಥಾನ ಪಡೆದಿದೆ ಎಂಬುದು ಅರ್ಥವಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಭಾರತದ ಗೋಮಾಂಸ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ಸೇನೆ ವಿವರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin