ರೈತರ ಕೂಗು`ಅತಂತ್ರ’

ಈ ಸುದ್ದಿಯನ್ನು ಶೇರ್ ಮಾಡಿ

9

ಆರ್ಥಿಕವಾಗಿ ತೀರ ಹಿಂದುಳಿದಿರುವ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿನ ಜನರ ಹಲವಾರು ಸಮಸ್ಯೆಗಳಲ್ಲಿ ಒಂದೆರಡು ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನವಾಗಿ ನಿರ್ಮಾಣವಾಗಿರುವ ಅತಂತ್ರ ಚಲನಚಿತ್ರದ ಟೀಸರ್ ಅನಾವರಣ ಸಮಾರಂಭ ನಡೆಯಿತು.ಬಿಹಾರ ಮೂಲದ ಬಿ.ಪಿ.ಸಿಂಗ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಇಸಾಕ್‍ಖಾಜಿ ನಿರ್ದೇಶಿಸಿದ್ದಾರೆ. ಉತ್ತರ ಕರ್ನಾಟಕದ ರಾಮದುರ್ಗ ಜಿಲ್ಲೆಯ ಒಂದು ಗ್ರಾಮದಲ್ಲಿನ ವಾಸ್ತವ ಸ್ಥಿತಿಯನ್ನು ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರಂತೆ. ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯ, ಭೂಮಿ ಆಳುವವರ ದಬ್ಬಾಳಿಕೆ, ವೈದ್ಯರ ಬೇಜವಾಬ್ದಾರಿತನದಿಂದ ತುಕ್ಕು ಹಿಡಿದಿರುವ ಯಂತ್ರೋಪಕರಣಗಳು, ಅಲ್ಲಿನ ರೋಗಿಗಳು ಅನುಭವಿಸುವ ನರಕ ಯಾತನೆ ಇಂಥ ವಿಷಯಗಳನ್ನು ಅತಂತ್ರ ಚಿತ್ರದಲ್ಲಿ ವಿವರಿಸಲಾಗಿದೆ. ಈ ಚಿತ್ರದಲ್ಲಿ ಯಾವುದೇ ಹಾಡು ಅಥವಾ ಫೈಟ್ ದೃಶ್ಯಗಳಿಲ್ಲ. ಸುಮಾರು 30 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಹಿರಿಯ ನಟಿ ರಾಧಾ ರಾಮಚಂದ್ರ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ನಟಿ ಭೂಮಿಕಾ ಆಕೆಯ ಮೊಮ್ಮ ಗಳಾಗಿಯೂ, ಗಂಡನಾಗಿ ನಿರ್ದೇಶಕ ಇಸಾಕಾ ಖಾಜಿ ಕಾಣಿಸಿ ಕೊಂಡಿದ್ದಾರೆ. ಅಲ್ಲದೆ ನಿರ್ಮಾಪಕ ಸಿಂಗ್ ಖಳನಾಯಕನ ಪಾತ್ರದಲ್ಲಿ ಹೊರಹೊಮ್ಮಿದ್ದಾರೆ. ವಿಶ್ವನಾಥ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.ಈ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದೆ. ಇಲ್ಲಿನ ತೊಂದರೆಗಳನ್ನು ಕಂಡು ಜನಪ್ರತಿನಿಧಿಗಳು ಸುಮ್ಮನಿದ್ದರೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಆಗಲಿಲ್ಲ. ಆದ್ದರಿಂದ ಈ ಸಿನಿಮಾದ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ನಿರ್ದೇಶಕ ಖಾಜಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin