ರೈತರ ಜಮೀನಿನಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

protested

ಗೌರಿಬಿದನೂರು, ಮೇ 5- ಪಟ್ಟಣದ ಹೊರವಲಯದಲ್ಲಿರುವ ಬೆಸ್ಕಾಂ 220 ಕೆ.ವಿ.ವಿದ್ಯುತ್ ಸ್ಥಾವರದಿಂದ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದಲ್ಲಿರುವ 60 ಕೆವಿ ಸ್ಥಾವರವನ್ನು 220 ಕೆವಿ ಮೇಲ್ದರ್ಜೆಗೇರಿಸುತ್ತಿರುವ ನಿಟ್ಟಿನಲ್ಲಿ ತಾಲೂಕಿನ ರೈತರ ಜಮೀನಿನಲ್ಲಿ ಅನುಮತಿ ಇಲ್ಲದೆ ಏಕಾಏಕಿ ವಿದ್ಯುತ್ ಟವರ್‍ಗಳ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಆರೋಪಿಸಿದರು.ತಾಲೂಕಿನ ವಿವಿಧ ಗ್ರಾಮಗಳ ರೈತರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ರೈತರಿಂದ ಒಪ್ಪಿಗೆಯನ್ನೇ ಪಡೆದು ಜಮೀನಿನಲ್ಲಿ ಟವರ್ ಹಾಕಬಾರದು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಬೀಕರ ಬರಗಾಲದಿಂದ ರೈತರು ಬೇಸಾಯ ಮಾಡಲಾಗದೆ ಜೀವನ ನಡೆಯುವುದೇ ದುಸ್ತರವಾಗಿದ್ದು, ಇಂತಹ ಸಂದರ್ಭದಲ್ಲಿ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದುಹೋದಲ್ಲಿ ಭೂಮಿ ಬೆಲೆ ಇಲ್ಲದಂತಾಗುತ್ತದೆ , ಜಮೀನು ನಂಬಿಕೊಂಡಿರುವ ರೈತರ ಪಾಡೇನೂ ಎಂದು ಪ್ರಶ್ನಿಸಿದರು.

ಪರಿಹಾರ ನೀಡಿ:

ತುಮಕೂರು, ಮತ್ತು ರಾಮನಗರಗಳಲ್ಲಿ ವಿದ್ಯುತ್ ಟವರ್ ಹಾದು ಹೋಗಿರುವ ಜಮೀನಿನ ರೈತರಿಗೆ ಇಂತಿಷ್ಟು ಪರಿಹಾರವನ್ನು ನೀಡಿದ್ದಾರೆ, ಆದರೆ ಇಲ್ಲಿನ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯವರು ಜಮೀನು ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ, ಈ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಲೋಕೇಶ್‍ಗೌಡ ಎಚ್ಚರಿಸಿದರು.  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇ 9 ರಂದು ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿದ್ಯುತ್ ಟವರ್ ಹಾದು ಹೋಗುವ ಜಮೀನಿನ ರೈತರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವಿಶೇಷ ಸಭೆ ಕರೆಯಲಾಗಿದ್ದು, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂಬ ಭರವಸೆಯನ್ನು ತಹಸೀಲ್ದಾರ್ ಸಭೆಗೆ ನೀಡಿದರು.  ತಹಸೀಲ್ದಾರ್ ಎಂ.ನಾಗರಾಜ್, ಬೆಸ್ಕಾ ಎಇಇ ನಾಗರಾಜ್, ರೈತ ಸಂಘದ ಅಧ್ಯಕ್ಷ ಲೋಕೇಶ್‍ಗೌಡ, ಹಾಗೂ ರೈತರುಗಳು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin