ರೈತರ ಜೀವನಾಡಿ ಹಾಲು ಒಕ್ಕೂಟ ಬಲಪಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

kr--pete-milk
ಕೆ.ಆರ್.ಪೇಟೆ, ಸೆ.16-
ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಜಿಲ್ಲೆಯ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವನ್ನು ಬಲಪಡಿಸಬೇಕೆಂದು ಮನ್‍ಮುಲ್ ನಿರ್ದೇಶಕ ಡಾಲು ರವಿ ಹೇಳಿದರು. ತಾಲೂಕಿನ ದೊಡ್ಡಕ್ಯಾತನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ರೈತರ ಮನೆ ಬಾಗಿಲಿಗೆ ಪ್ರತಿ ವಾರವೂ ಹಾಲಿನ ಹಣವನ್ನು ನೀಡುವ ಮೂಲಕ ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಬೇಸಾಯದಲ್ಲಿ ನಷ್ಟವಾದರೂ ಹಾಲು ಉತ್ಪಾದನೆಯು ರೈತರಿಗೆ ಆಸರೆಯಾಗುವ ಮೂಲಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂದು ಡಾಲು ರವಿ ತಿಳಿಸಿದರು. ಸಂಘದ ಅಧ್ಯಕ್ಷೆ ಶೋಭಾರಾಣಿ, ಕಾರ್ಯದರ್ಶಿ ಸೌಭಾಗ್ಯಪುಟ್ಟರಾಜು , ಮಾರ್ಗದ ವಿಸ್ತರಣಾಧಿಕಾರಿ ರಮೇಶ್ ಕುಮಾರ್, ಹಾಲು ಉತ್ಪಾದಕರ ಸಹಕಾರ ಯೂನಿಯನ್ ಅಧ್ಯಕ್ಷ ಮರಿಸ್ವಾಮಿಗೌಡ, ಗ್ರಾ.ಪಂ. ಡಿ.ಎನ್.ಪುಟ್ಟರಾಜು, ವಿಎಸ್‍ಎಸ್‍ಎನ್ ಅಧ್ಯಕ್ಷ ಡಿ.ಜೆ.ಮಲ್ಲೇಶ್, ಮುಖಂಡ ಡಿ.ಪಿ.ಪರಮೇಶ್, ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin