ರೈತರ ಬವಣೆ ಮೇಲೆ ಬೆಳಕು ಚೆಲ್ಲುವ ಚಿತ್ರ`ಹೊಂಬಣ್ಣ’

ಈ ಸುದ್ದಿಯನ್ನು ಶೇರ್ ಮಾಡಿ

Hombanna

ಬೆಂಗಳೂರು,ಅ.18-ದೇಶದ ಬೆನ್ನೆಲುಬು ಅನ್ನದಾತ ಹಿಂದಿನ ಕಾಲದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು, ಇಂದು ಸಹ ಅವರ ಸಮಸ್ಯೆಗಳು ಬಗೆಹರಿದಿಲ್ಲ. ರೈತರ ಸಂಕಷ್ಟಗಳ ಕುರಿತು ರಕ್ಷಿತ್ ತೀರ್ಥಹಳ್ಳಿ ಕಥೆ, ಚಿತ್ರಕಥೆ, ಸಾಹಿತ್ಯ ಸಂಭಾಷಣೆ ಬರೆದು ನಿರ್ದೇಶಿಸಿರುವ ಹೊಂಬಣ್ಣ ಚಿತ್ರ ರೈತರಿಗೆ ಜಾಗೃತಿ ಮೂಡಿಸುವ ಸಿನಿಮಾ ಎಂದು ಹಿರಿಯ ಹೋರಾಟಗಾರ ಕಡಿದಾಳು ಶಾಮಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇಂದು ನಡೆದ ಧ್ವನಿ ಸುರುಳಿ ಬಿಡಗುಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೆನಾಡಿನ ರೈತರು ಭೂಮಿಗಾಗಿ ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುವುದನ್ನು ಈ ಚಿತ್ರದಲ್ಲಿ ತೋರಿಸಿದ್ದು ಅವರಿಗೆ ಈ ಚಿತ್ರ ಮಾದರಿಯಾಗಲಿದೆ ಎಂದು ತಿಳಿಸಿದರು.

ಮಲೆನಾಡು ರೈತರಿಂದ ಭೂಗಳ್ಳರು, ದೊಡ್ಡ ಕಂಪನಿಗಳು, ಪ್ರವಾಸೋದ್ಯಮ ಹೆಸರಿನಲ್ಲಿ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಬಹುತೇಕ ಚಿತ್ರವನ್ನು ಮಲೆನಾಡಿನ ಸುತ್ತಮುತ್ತಲಿನಲ್ಲೇ ಚಿತ್ರೀಕರಿಸಲಾಗಿದೆ ಎಂದು ಹೇಳಿದರು.  ಈ ಚಿತ್ರದಲ್ಲಿ ಏಳು ಹಾಡುಗಳಿದ್ದು , ವಿನು ಮನಸು ಅವರು ಸಂಗೀತ ನೀಡಿದ್ದು, ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ 6 ಹಾಡುಗಳನ್ನು ಬರೆದಿದ್ದು, ಒಂದು ಹಾಡನ್ನು ಫೇಸ್‍ಬುಕ್‍ನ ಐದು ಗೆಳೆಯರು ರಚಿಸಿರುವುದು ವಿಶೇಷವಾಗಿದೆ. ಚಿತ್ರದಲ್ಲಿ ಸುಬ್ಬು, ಧನುಗೌಡ ಶರ್ಮಿತ್ ಶೆಟ್ಟಿ , ನೀನಾಸಂ ಅಶ್ವಥ್ ಅವರು ಅಭಿನಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ರೈತರ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಅಡಿಕೆ ಉದ್ಯಮಿ ನಿವೇದನ್ ನಿಂಬೆ ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin