ರೈತರ ಮೇಲಿನ ಕೇಸ್‍ಗಳನ್ನು ವಾಪಸ್ ಪಡೆಯಲು ಈಶ್ವರಪ್ಪ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

eshwarappa

ವಿಜಯಪುರ, ಆ.9-ಮಹದಾಯಿ ಯೋಜನೆಗೆ ಸಂಬಂಧವಾಗಿ ಬಂಧಿಸಿರುವ ಎಲ್ಲಾ ರೈತರನ್ನು ಬಿಡುಗಡೆಗೊಳಿಸಿ, ಅವರ ಮೇಲಿನ ಕೇಸುಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಆಲ್‍ಫಾನ್ಸೊ ಪ್ರೈಡ್‍ನ ವತಿಯಿಂದ ಏರ್ಪಡಿಸಿದ್ದ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಭಾಗದ ರೈತರು, ಸರ್ಕಾರದ ನಡವಳಿಕೆ ವಿರೋಧಿಸಿ, ಹೋರಾಟ ಮಾಡಲು ಇಳಿದಾಗ,   ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರ, ರೈತರು, ಮಹಿಳೆಯರು, ಮಕ್ಕಳು, ವೃಧ್ದರು, ಗರ್ಭೀಣಿಯರು, ಎನ್ನದೇ ಎಲ್ಲರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಜ್ಯೋತಿಷಿ ಆನಂದ ಗುರೂಜಿ ಮಾತನಾಡಿ,ರೈತರ ಮೇಲಿನ ದೌರ್ಜನ್ಯ ಸರಿಯಲ್ಲ. ಕೂಡಲೇ ಎಲ್ಲಾ ರೈತರನ್ನು ಸರಕಾರ ಬಿಡುಗಡೆಗೊಳಿಸಿ, ಮಹದಾಯಿ ನದಿಯಿಂದ ಕರ್ನಾಟಕ ಸರಕಾರದ ಪಾಲು ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ತಿಳಿಸಿದರು. ಶಾಸಕ ಪಿಳ್ಳಮುನಿಶ್ಯಾಮಪ್ಪ, ಆಲ್‍ಫಾನ್ಸೊ ಪ್ರೈಡ್‍ನ ವ್ಯವಸ್ಥಾಪಕರಾದ ವೆಂಕಟೇಶ್ವರ್ ರಾವ್, ಪಾಲುದಾರರಾದ ಕೆ.ಆರ್.ಮಧು, ಕೃಷ್ಣಕುಮಾರ್, ಉಪಸ್ಥಿತರಿದ್ದರು.

Facebook Comments

Sri Raghav

Admin