ರೈತರ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BELURU

ಬೇಲೂರು, ಅ.4– ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಹಾಗೂ ರೈತರ ಆತ್ಮಹತ್ಯೆಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶಿ ಬಳ್ಳೂರು ಸ್ವಾಮೀಗೌಡ, ರಾಜ್ಯದಲ್ಲಿ ಸತತವಾಗಿ ಮೂರು ವರ್ಷಗಳಿಂದ ತೀವ್ರವಾದ ಬರಗಾಲ ಇರುವುದರಿಂದ ರೈತರು ಬೆಳೆಯನ್ನು ಬೆಳೆಯಲಾಗದೆ ತತ್ತರಿಸಿ ಹೋಗಿ, ಕುಡಿಯುವುದಕ್ಕೂ ನೀರಿಲ್ಲದಂತಹ ಸ್ಥಿತಿಗೆ ಬಂದಿದ್ದಾರೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳತ್ತ ತಿರುಗಿಯೂ ನೋಡುತ್ತಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ, ಪುನ: ಹೊಸ ಸಾಲವನ್ನು ರೈತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಬರ ಪರಿಹಾರ ವಿತರಣೆಯಲ್ಲಿ ಸಣ್ಣ ರೈತ ದೊಡ್ಡ ರೈತರೆಂಬ ತಾರಾತಮ್ಯ ಮಾಡದೆ ಸಮನಾವಾಗಿ ಪರಿಹಾರ ವಿತಿರಿಸಬೇಕು. ರೈತರು ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ರೈತರಿಗೆ ಸಕ್ರಮ ಮಾಡಿ ಸಾಗುವಳಿಯನ್ನು ನೀಡಬೇಕೆಂದು ಸರ್ಕಾರ ತಿಳಿಸಿದ್ದರೂ ತಾಲೂಕಿನಲ್ಲಿ ಬಗರ್ ಹುಕುಂ ಕಮಿಟಿಯೆ ಇಲ್ಲದಿರುವುದು ಹುಕುಂ ಕಮಿಟಿಯನ್ನು ಮಾಡದೆ ತಾಲೂಕು ಆಡಳಿತ ಬಡ ರೈತರ ಜೀವನದ ಜೊತೆ ಚೆಲ್ಲಾಟವಾಡುತಿದೆ. ಬಗರ್ ಹುಕುಂ ಸಾಗುವಳಿದಾರರ ಮತ್ತು ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ಇತ್ಯರ್ಥಪಡಿಸಬೇಕು.ಇಲ್ಲವಾದರೆ ಮುಂದಿನ 8 ದಿನಗಳೊಳಗಾಗಿ ಬಗರ್ ಹುಕುಂ ಕಮಿಟಿಯನ್ನು ಮಾಡಿ ಬಡವರ ಜಮೀನುಗಳನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕು. ಇಲ್ಲದಿದ್ದಲ್ಲಿ ರೈತ ಸಂಘದಿಂದ ತಾಲೂಕು ಕಚೇರಿ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ರಾಜ್ಯದ ರೈತರು ಮಳೆ ಇಲ್ಲದೆ ಬೆಳೆ ಬಾರದ ಕಾರಣ ಕೈ ಕಟ್ಟಿ ಕೂರುವ ಸ್ಥಿತಿಗೆ ಬಂದಿದ್ದು, ತೀವ್ರವಾದ ಬರಗಾಲ ಇರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಕ್ಷಣವೆ ನೀರು ಮತ್ತು ಜಾನುವಾರುಗಳಿಗೆ ಮೇವನ್ನು ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.ರೈತ ಸಂಘದ ಮುಖಂಡುಗಳಾದ ಗೌ.ಅಧ್ಯಕ್ಷರಾದ ವಿರುಪಾಕ್ಷ, ಬಸವೇಗೌಡ, ಪದ್ಮಪ್ರಭು, ಕಾರ್ಯದರ್ಶಿ ಬಸವರಾಜು, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ನಿರ್ವಾಣಯ್ಯ, ಚನ್ನೇಗೌಡ, ಪುಪ್ಪೇಗೌಡ, ಹೂವಣ್ಣ, ಶಿವಪ್ಪ, ಹಾಲಪ್ಪ. ನಂಜಪ್ಪ, ವಿಜಯಕುಮಾರ್, ಇನ್ನಿತರರಿದ್ದರು.

 

 

► Follow us on –  Facebook / Twitter  / Google+

 

Facebook Comments

Sri Raghav

Admin