ರೈತರ ಸಾಲ ಮನ್ನಾ ಬಗ್ಗೆ ಸಿಎಂ ಹೆಚ್’ಡಿಕೆ ನೀಡಿದ ಸ್ಪಷ್ಟನೆ ಏನು..?

ಈ ಸುದ್ದಿಯನ್ನು ಶೇರ್ ಮಾಡಿ

kumaraswamy-In-session
ಬೆಂಗಳೂರು, ಮೇ 25- ರೈತರ ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಅವರು, ನಾನು ಸಾಲ ಮನ್ನಾ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಚುನಾವಣೆಯಲ್ಲಿ ನಮಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಮಿತ್ರ ಪಕ್ಷದೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಮಾಷೆಯಾಗಿ ಹೇಳಿದ್ದೆ. ಸಾಲ ಮನ್ನಾ ವಿಚಾರದಲ್ಲಿ ನನ್ನ ಬದ್ಧತೆ ಅಚಲ. ಮೈತ್ರಿ ಪಕ್ಷದ ಶಾಸಕರು, ನಾಯಕರನ್ನು ಒಪ್ಪಿಸಿಕೊಂಡೇ ಸಾಲ ಮನ್ನಾ ಮಾಡುತ್ತೇನೆ ಎಂದರು.

ರೈತರ ಕಷ್ಟಗಳ ಬಗ್ಗೆ ಯಡಿಯೂರಪ್ಪ ಅವರ ಬಳಿ ಯಾವುದೇ ಮಾಹಿತಿಗಳು ಇದ್ದರೂ ಕೊಡಲಿ. ನಾನು ಅವರ ಕಷ್ಟಗಳನ್ನು ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಸಂಘಟನೆಗಳು ಪ್ರತಿಭಟನೆ ನಡೆಸಲು ಅವಕಾಶ ನೀಡದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. 2006ರಲ್ಲಿ ನಾನು ಬಿಜೆಪಿ ಜತೆ ಕೈ ಜೋಡಿಸಿದಾಗ ನನ್ನ ತಂದೆ ದೇವೇಗೌಡ ಅವರ ಜಾತ್ಯಾತೀತ ನಿಲುವಿಗೆ ಧಕ್ಕೆಯಾಯಿತು. ಆ ಕಪ್ಪುಚುಕ್ಕಿ ತೊಳೆಯಬೇಕೆಂದು ಮಾನಸಿಕವಾಗಿ ಸಿದ್ದನಾಗಿದ್ದೆ. ಸಮ್ಮಿಶ್ರ ಸರ್ಕಾರಕ್ಕಾಗಿ ಬೇರೆ ಪಕ್ಷದಿಂದಲೂ ಆಹ್ವಾನ ಬಂತು. ಆದರೆ, ದೇವೇಗೌಡರ ನಿಲುವಿಗೆ ನಾನು ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ನಾನು ಕಿರುಕುಳ ಅನುಭವಿಸಿದೆ. ಸರ್ಕಾರ ರಚನೆ ಆದ ಒಂದು ತಿಂಗಳಲ್ಲೇ ಬಿಜೆಪಿ ವಿಧಾನಪರಿಷತ್ ಸದಸ್ಯರೊಬ್ಬರು ನನ್ನ ವಿರುದ್ಧ 150ಕೋಟಿ ಗಣಿ ಹಗರಣ ಆರೋಪ ಮಾಡಿದರು. ಸಚಿವರೊಬ್ಬರು ನನ್ನ ವಿರುದ್ಧ ಪೊಲೀಸ್ ದೂರು ನೀಡಿ, ಕುಮಾರಸ್ವಾಮಿ ಅವರು ನನ್ನ ಕೊಲ್ಲಿಸಲು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದರು. ಎಲ್ಲವನ್ನು ಸಹಿಸಿಕೊಂಡಿದ್ದೇನೆ ಎಂದರು.

Facebook Comments

Sri Raghav

Admin