ರೈತರ ಸಾಲ ಮನ್ನಾ ಮಾಡಿ ಹೋಳಿ ಉಡುಗೊರೆ ನೀಡುವರೇ ಮೋದಿ ..?

ಈ ಸುದ್ದಿಯನ್ನು ಶೇರ್ ಮಾಡಿ

modi

ನವದೆಹಲಿ, ಮಾ.11- ರೈತರ ಸಾಲ ಮನ್ನಾ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಹಿ ಸುದ್ದಿ ಕೊಡುವರೇ…? ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಅವರು ಬಹಿರಂಗ ಭಾಷಣ ಮಾಡುವಾಗ ದೇಶದ ಜನರಿಗೆ ಹೋಳಿಗೆ ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದರು. ಮಾಧ್ಯಮಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ವ್ಯಾಖ್ಯಾನಿಸಲಾಗಿತ್ತು. ಮೋದಿ ಅವರು ನೀಡಿದ ಈ ಭರವಸೆಯೇ ಭರ್ಜರಿಯಾಗಿ ಗೆಲುವು ಸಾಧಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ನಾಳೆಯ ಹೋಳಿ ಹಬ್ಬಕ್ಕೆ ದೇಶದ ರೈತರಿಗೆ ಉಡುಗೊರೆ ಘೋಷಣೆ ಮಾಡಲಿದ್ದಾರೆಯೇ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ನೋಟು ನಿಷೇಧದಿಂದ ಸಂಕಷ್ಟಕ್ಕೀಡಾದ ಜನ ನೋಟು ನಿಷೇಧದ ಗಡುವು ಮುಗಿದ ಮೇಲೆ ಪ್ರಧಾನಿ ಅವರಿಂದ ಸಾಕಷ್ಟು ನಿರೀಕ್ಷೆ ಮಾಡಿದ್ದರಾದರೂ ಏನು ದಕ್ಕಿರಲಿಲ್ಲ. [ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ( Live Updates)  ]

ಚುನಾವಣಾ ಸಂದರ್ಭದಲ್ಲಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಭಾರೀ ಉಡುಗೊರೆಯ ಭರವಸೆ ನೀಡಿದ್ದು, ಪರೋಕ್ಷವಾಗಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಉತ್ತರ ಪ್ರದೇಶ, ಉತ್ತರಕಾಂಡ, ಮಣಿಪುರದಲ್ಲಿ ಭಾರೀ ಯಶಸ್ಸು ಗಳಿಸಿರುವ ಬಿಜೆಪಿ ರೈತರಿಗೆ ನೆರವಾಗುವುದೇ..?
ಸತತ ಬರಗಾಲದಿಂದ ತತ್ತರಿಸುತ್ತಿರುವ ಅನ್ನದಾತನನನ್ನು ಋಣ ಮುಕ್ತನನ್ನಾಗಿಸುವರೇ ಕಾದು ನೋಡಬೇಕು. ಈಗಾಗಲೇ ದೇಶದ ಎಲ್ಲಾ ರೈತ ಸಂಘಟನೆಗಳು ರಾಷ್ಟ್ರೀಯ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಆಗಸ್ಟ್ ತಿಂಗಳಲ್ಲಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.

ಅದಕ್ಕೂ ಮುನ್ನವೇ ಚುನಾವಣಾ ಗೆಲುವಿನ ಖುಷಿಯಲ್ಲಿರುವ ಬಿಜೆಪಿ ಸಾಲ ಮನ್ನಾ ಮಾಡುವ ಮೂಲಕ ಮುಂಬರುವ ರಾಜ್ಯಗಳ ಚುನಾವಣೆಗಳ ಗೆಲುವನ್ನು ತಮ್ಮದಾಗಿಸುವ ರಣತಂತ್ರ ರೂಪಿಸುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin