ರೈತ ವಿರೋಧಿ ನೀತಿಯಿಂದ ಆತ್ಮಹತ್ಯೆ ದಾರಿಹಿಡಿಯುತ್ತಿರುವ ಅನ್ನದಾತ : ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

turuvekere

ತುರುವೇಕೆರೆ, ಆ.30- ಸರ್ಕಾರಗಳ ರೈತ ವಿರೋಧಿ ನೀತಿಯಿಂದ ಪ್ರತಿ ಅರ್ಧ ತಾಸಿಗೊಬ್ಬ ಅನ್ನದಾತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಎ.ಗೋವಿಂದರಾಜ್ ವಿಷಾದಿಸಿದರು.  ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಬೀರನಕೆರೆ, ಆನಡಗು, ಜನಾರ್ಧನಪುರ ಹಾಗೂ ಚಿಕ್ಕಶೇಟ್ಟಿಕೆರೆ ಗ್ರಾಮಘಟಕಗಳ ನಾಮಫಲಕ ಅನಾವರಣಗೊಳಿಸಿ ಚಿಕ್ಕಶೇಟ್ಟಿಕೆರೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ. ನಾಲೆಗಳ ಆಧುನೀಕರಣ ಮತ್ತು ಅಗಲೀಕರಣ ಕಾರ್ಯ ತ್ವರಿತ ಗತಿಯಲ್ಲಿ ಆಗದೇ ಇರುವುದರಿಂದ ಕೇವಲ 8 ಟಿಎಂಸಿ ನೀರನ್ನು ತುಮಕೂರಿನತ್ತ ಹರಿಸಲು ಸಾದ್ಯವಾಗುತ್ತಿದೆ. ಉಳೀದ 17 ಟಿಎಂಸಿ ನೀರನ್ನು ನಮ್ಮ ಜಿಲ್ಲೆಗೆ ಹರಿಸಲು ಇಲ್ಲಿನ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.ಇದೇ ವೇಳೆ ಯುವ ಪದಾಧಿಕಾರಿಗಳಿಗೆ ಶಾಲು ಹೊದಿಸುವ ಮೂಲಕ ಸಾಮೂಹಿಕವಾಗಿ ರೈತದೀಕ್ಷೆಯನ್ನು ಬೋಧಿಸಲಾಯಿತು.

ಘಟಕದ ಅಧ್ಯಕ್ಷ ಕಣಕೂರು ಚಂದ್ರಶೇಖರ್, ರಾಜ್ಯ ರೈತ ಸಂಘದ ಗೌರವಧ್ಯಕ್ಷ ಅಸ್ಲಾಂಪಾಷ, ಗುಬ್ಬಿ ತಾಲೂಕು ಅಧ್ಯಕ್ಷ ನಿಜಾನಂದಮೂರ್ತಿ, ತಾಲೂಕ ಅಧ್ಯಕ್ಷ ಶ್ರೀನಿವಾಸ್‍ಗೌಡ, ನಗರ ಘಟಕದ ಜಾಫರ್, ಶಿರಾ ತಾಲೂಕ ಅಧ್ಯಕ್ಷ ನಾದೂರುಕೆಂಚಪ್ಪ, ಗುರುಚನ್ನಬಸಪ್ಪ, ಗ್ರಾಪಂ ಸದಸ್ಯರಾದ ನೂರ್‍ಅಸ್ಮಾ, ಕುಮಾರ್, ಲೋಕೇಶ್, ನಿವೃತ್ತ ಶಿಕ್ಷಕ ವರದಯ್ಯ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin