ರೈತ ಸಂಘ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

beluru-789

ಬೇಲೂರು, ಸೆ.7- ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವ ಉದ್ದೇಶದಿಂದ ಇಲ್ಲಿನ ಯಗಚಿ ಜಲಾಶಯದಿಂದ ನೀರನ್ನು ಯಾವುದೇ ಕಾರಣಕ್ಕೂ ಬಿಡಲು ಬಿಡುವುದಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಹೇಳಿದರು.ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದ ಅವರು , ರಾಜ್ಯದ ಜನತೆಗೆ ಮೊದಲು ಕುಡಿಯಲು ನೀರಿಲ್ಲ, ಇನ್ನು ಸುಪ್ರೀಂ ಕೋರ್ಟ್‍ನ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡಲು ಎಲ್ಲಿಂದ ಸಾಧ್ಯ. ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಯಾವುದೇ ಕಾರಣಕ್ಕೂ ಪಾಲಿಸಬಾರದು.

ಅಲ್ಲದೆ ರಾಜ್ಯದಲ್ಲಿನ ವಸ್ತು ಸ್ಥಿತಿಯನ್ನು ವಿವರಾವಾಗಿ ದಾಖಲೆ ಸಮೇತ ಮನವರಿಕೆ ಮಾಡಿಕೊಡಬೇಕು. ಹಾಗೂ ನಮ್ಮ ಜಿಲ್ಲೆಯ ಹೇಮಾವತಿ ಮತ್ತು ಯಗಚಿ ಜಲಾಶಯಗಳಿಂದ ಯಾವುದೇ ಕಾರಣಕ್ಕೂ, ಕೆಆರ್‍ಎಸ್‍ಗೆ ನೀರು ಬಿಡಬಾರದು. ಹಾಗೇನಾದರೂ ಬಿಟ್ಟಿದ್ದು ಕಂಡು ಬಂದಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಅಲ್ಲದೆ ಇಲ್ಲಿನ ಯಗಚಿ ಜಲಾಶಯದಿಂದ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ದೊಡ್ಡವೀರೇಗೌಡ, ಚನ್ನೇಗೌಡ, ಬಸವೇಗೌಡ, ಹೂವಣ್ಣ, ಪಾಲಾಕ್ಷ, ಪ್ರಕಾಶ, ಮಂಜುನಾಥ್ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

 

Follow us on –  Facebook / Twitter  / Google+

Facebook Comments

Sri Raghav

Admin