ರೈಲು ಇಳಿಯುವಾಗ ಬಿದ್ದು ರೈಲ್ವೆ ಸಬ್‍ ಇನ್‍ಸ್ಪೆಕ್ಟರ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

rail

ಮಂಡ್ಯ,ಅ.17-ಮೈಸೂರಿನಿಂದ ತಿರುಪತಿಗೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ರೈಲ್ವೆ ರಕ್ಷಣಾ ದಳದ ಸಬ್‍ಇನ್‍ಸ್ಪೆಕ್ಟರ್ ತಪಾಸಣೆ ನಡೆಸಿ ಇಳಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ರೈಲ್ವೆ ರಕ್ಷಣಾ ದಳದ ಸಬ್‍ಇನ್‍ಸ್ಪೆಕ್ಟರ್ ಪ್ರಭುಜ್ಯೋತಿ(36) ಮೃತಪಟ್ಟವರು. ಮೈಸೂರಿನಿಂದ ತಿರುಪತಿಗೆ ತೆರಳುವ ಪ್ಯಾಸೆಂಜರ್ ರೈಲು ಸಂಜೆ 6.15ರಲ್ಲಿ ಮಂಡ್ಯ ನಿಲ್ದಾಣದಲ್ಲಿ ನಿಂತಿದ್ದಾಗ ರೈಲಿನಲ್ಲಿ ಹೆಚ್ಚು ಪ್ರಯಾಣಿಕರಿದ್ದರು. ಈ ವೇಳೆ ರೈಲು ತಪಾಸಣೆಗೆಂದು ರೈಲ್ವೆ ರಕ್ಷಣಾ ದಳದ ಸಬ್‍ಇನ್‍ಸ್ಪೆಕ್ಟರ್ ಪ್ರಭು ಜ್ಯೋತಿ ಅವರು ಐದು ಮಂದಿ ಸಿಬ್ಬಂದಿಯೊಂದಿಗೆ ರೈಲು ಹತ್ತಿದ್ದಾರೆ.

ತಪಾಸಣೆ ನಡೆಸುತ್ತಿದ್ದಾಗ ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಈ ವೇಳೆ ಅವಸರವಾಗಿ ತಪಾಸಣೆ ಮುಗಿಸಿ ಇಳಿಯುತ್ತಿದ್ದಾಗ ಆಯತಪ್ಪಿ ಪ್ರಭುಜ್ಯೋತಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಎಡಗಾಲು ತುಂಡಾಗಿದ್ದು, ತಲೆಗೆ ಗಂಭೀರ ಗಾಯವಾಗಿವೆ. ತಕ್ಷಣ ಸಿಬ್ಬಂದಿಗಳು ಅವರನ್ನು ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರ. ಈ ಸಂಬಂಧ ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin