ರೈಲು ಡಿಕ್ಕಿ ರಭಸಕ್ಕೆ ಕುಸಿದು ಬಿದ್ದ ನಿಲ್ದಾಣದ ಛಾವಣಿ. ಓರ್ವ ಮಹಿಳೆ ಸಾವು, 114 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Train-01

ಹೊಬೋಕೆನ್, ಸೆ.30– ಪ್ರಯಾಣಿಕರ ರೈಲು ಹಳಿ ತಪ್ಪಿ ನಿಲ್ದಾಣಕ್ಕೆ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, 114 ಜನ ಗಾಯಗೊಂಡಿರುವ ಘಟನೆ ನ್ಯೂಜೆರ್ಸಿ ರೈಲು ನಿಲ್ದಾಣದಲ್ಲಿ ನಿನ್ನೆ ಸಂಭವಿಸಿದೆ. ಈ ದುರ್ಘಟನೆಯಿಂದ ಸಾರಿಗೆ ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಡಿಕ್ಕಿಯ ರಭಸಕ್ಕೆ ನಿಲ್ದಾಣದ ಛಾವಣಿಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ. ರೈಲ್ವೆ ಪ್ಲಾಟ್‍ಫಾರಂನಲ್ಲಿ ನಿಂತಿದ್ದ ವೈದ್ಯೆ ಫ್ಯಾಬಿಯೊಲಾ ಬಿಟ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದು, 114 ಮಂದಿಗೆ ಗಾಯಗಳಾಗಿವೆ. ಈ ಅಪಘಾತದಿಂದ ಮ್ಯಾನ್‍ಹಟ್ಟನ್ ಮಾರ್ಗದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ನಿಲ್ದಾಣದ ಒಂದು ಭಾಗ ಜಖಂಗೊಂಡಿದೆ ಎಂದು ನ್ಯೂಜೆರ್ಸಿ ಗೌರ್ನರ್ ಕ್ರಿಸ್ ಕ್ರಿಸ್ಟೀ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin