ರೈಲು ನಿಲ್ದಾಣದಿಂದ ಮಹಿಳೆ ಅಪಹರಿಸಿ ಗ್ಯಾಂಗ್ ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Gang-rape

ಸಂಭಾಲ್ (ಉ.ಪ್ರ.), ಜೂ.27-ಉತ್ತರಪ್ರದೇಶದ ಬರೇಲಿ ರೈಲು ನಿಲ್ದಾಣದಿಂದ ಮಹಿಳೆಯೊಬ್ಬಳನ್ನು ಅಪಹರಿಸಿದ ಮೂವರು ದುಷ್ಕರ್ಮಿಗಳು ನಾಲ್ಕು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾಯ ಘಟನೆ ಇಲ್ಲಿನ ಗಿನ್ನೌರ್ ಪ್ರದೇಶದಲ್ಲಿ ನಡೆದಿದೆ.  ಪಾಣಿಪಟ್‍ಗೆ ತೆರಳಲು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ 40 ವರ್ಷದ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡ ಮೂವರು ದುಷ್ಕರ್ಮಿಗಳು ಆಕೆಗೆ ಮತ್ತು ಬರುವ ಪಾನೀಯ ನೀಡಿದರು. ಪ್ರಜ್ಞಾಶೂನ್ಯಳಾದ ಮಹಿಳೆಯನ್ನು ಆಕೆಯ 11 ವರ್ಷದ ಪುತ್ರಿ ಮತ್ತು 13 ವರ್ಷದ ಪುತ್ರನೊಂದಿಗೆ ಅಪಹರಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ತಿಳಿಸಿದ್ದಾರೆ.

ಅಪಹೃತ ಮಹಿಳೆಯನ್ನು ಗಿನ್ನೌರ್ ಗ್ರಾಮಕ್ಕೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ನಾಲ್ಕು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಕ್ಕಳೊಂದಿಗೆ ಅಲ್ಲಿಂದ ಪಾರಾದ ಮಹಿಳೆ ನಂತರ ಚಾಂದೌಸಿ ಪೊಲೀಸ್ ಠಾಣೆಗೆ ದೂರು ನೀಡಿದರು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು, ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin