ರೈಲು ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಹಿರೀಸಾವೆ, ಫೆ.10- ಬೆಂಗಳೂರಿನಿಂದ ಹಿರೀಸಾವೆಗೆ ಆಗಮಿಸುತ್ತಿದ್ದ ಪರೀಕ್ಷಾರ್ಥ ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ ಮೂವರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕುಣಿಗಲ್ ತಾಲ್ಲೂಕು ಮಲ್ಲಾಘಟ್ಟದ ರಫೀಕ್, ಶಫಿ. ಮತ್ತು ಇಸ್ಮಾಯಿಲ್ ಬಂಧಿತರು. ಈ ಮೂವರು ಕೆಲವು ಗ್ರಾಮಸ್ಥರ ಜೊತೆಯಲ್ಲಿ ಕುಣಿಗಲ್ ಬಳಿ ಮಲ್ಲಾಘಟ್ಟದಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಪಾದಚಾರಿ ರಸ್ತೆ ನಿರ್ಮಿಸಬೇಕೆಂದು ಪರೀಕ್ಷಾರ್ಥ ರೈಲಿನ ಹಳಿಗಳ ಮೇಲೆ ಕಲ್ಲಿಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ್ದರು.ರೈಲ್ವೆ ಆಧಿಕಾರಿಗಳು ಹಾಗೂ ರೈಲ್ವೆ ಪೊಲೀಸರು ಈ ಮೂವರನ್ನು ಅದೇ ಪರೀಕ್ಷಾರ್ಥ ರೈಲಿನಲ್ಲೇ ಹಿರೀಸಾವೆಗೆ ಕರೆತಂದು ನಂತರ ಬೇರೆ ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin