ರೈಲ್ವೆ ಇಲಾಖೆಗೆ 3.75ಲಕ್ಷ ಕೋಟಿ ಬಂಡವಾಳ ಹೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Suresh-prabhu
ನವದೆಹಲಿ, ಜೂ.4-ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಸಾಧನೆಗಳಾಗಿದ್ದು, ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಅನುಭವವಾಗಿದೆ. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬೆಳವಣಿಗೆಯ ಇಂಜಿನ್ ವೇಗವಾಗಿ ಚಲಿಸುತ್ತಿದೆ ಎಂದು ರೈಲ್ವೆ ಸಚಿವ ಸುರೇಶ ಪ್ರಭು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ರೈಲ್ವೆ ಇಲಾಖೆಯಲ್ಲಿ ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಸಾಂಸ್ಥಿಕವಾಗಿ ಮತ್ತು ಬೌದ್ಧಿಕವಾಗಿ ಬಹಳಷ್ಟು ಬದಲಾವಣೆಗಳಾಗಿವೆ. 2014ರ ಏಪ್ರಿಲ್‍ನಿಂದ 2018ರ ಮಾರ್ಚ್‍ವರೆಗೂ 3.75 ಲಕ್ಷ ಬಂಡವಾಳ ಹೂಡಿಕೆಯಾಗಿದೆ. ಎಲ್ಲಾ ಯೋಜನೆಗಳಿಗೂ ಅನುದಾನ ಒದಗಿಸಲಾಗುತ್ತಿದ್ದು, ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 60 ಯೋಜನೆಗಳನ್ನು ಕೈಗೊಂಡು 7686 ಕಿ.ಮೀ. ಹೆಚ್ಚುವರಿ ರೈಲ್ವೆ ಮಾರ್ಗ ನಿರ್ಮಿಸಲಾಗಿದೆ.


ರೈಲ್ವೆ ವಿದ್ಯುದೀಕರಣ ಯೋಜನೆ 2009ರಿಂದ 2014ರವರೆಗೆ 1184 ಕಿ.ಮೀಗಳಷ್ಟು ಇದ್ದದ್ದು, 2013 ರಿಂದ 2017ರವರೆಗ 2013 ಕಿ.ಮೀ ಗಳಷ್ಟಾಗಿ ದಾಖಲೆ ನಿರ್ಮಾಣವಾಗಿದೆ.  2016-17ರಲ್ಲಿ 8.2 ಬಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದು, 1.11 ಬಿಲಿಯನ್ ಟನ್ ಸರಕನ್ನು ಸಾಗಿಸಲಾಗಿದೆ. ಸ್ವಚ್ಛಭಾರತ್ ಯೋಜನೆಯನ್ನು ಪರಿಚಯಿಸಲಾಗಿದೆ. ಟಿಕೆಟ್ ಹಂಚಿಕೆಯ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಕ್ಲೀನ್ ಮೈಕ್ ಕೋಚ್ ಜಾರಿಗೆ ತರಲಾಗಿದೆ. ಬಯೋ ಟಾಯ್ಲೆಟ್‍ಗಳನ್ನು ಪರಿಚಯಿಸಿ 40 ಸಾವಿರ ಕೋಚ್‍ಗಳಿಗೆ ಅಳವಡಿಸಲಾಗಿದೆ.

ವಿವಿಧ ರೈಲ್ವೆ ನಿಲ್ದಾಣಗಳಲ್ಲಿ 208ಲಿಫ್ಟ್‍ಗಳು, 380 ಎಕ್ಸ್ಯುಲೇಟರ್‍ಗಳನ್ನು ಅಳವಡಿಸಲಾಗಿದ್ದು, 3904 ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ನಿರ್ಮಿಸಲಾಗಿದೆ. 350 ರೈಲುಗಳ ವೇಗ ಹೆಚ್ಚಿಸಲಾಗಿದೆ. ಕಾಯ್ದಿರಿಸುವ ಸೀಟುಗಳ ಪ್ರಮಾಣವನ್ನು 4.11 ಕೋಟಿಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.  2020ರ ವೇಳೆಗೆ ಇಲಾಖೆ ಹಲವಾರು ಗುರಿಗಳನ್ನು ನಿಗದಿಪಡಿಸಿಕೊಂಡಿದ್ದು, ಬೇಡಿಕೆ ಆಧರಿಸಿ ಸೀಟು ಕಾಯ್ದಿರಿಸುವ ಪದ್ಧತಿಯನ್ನು ಜಾರಿಗೊಳಿಸಲಾಗುತ್ತದೆ. ರೈಲ್ವೆ ವೇಳಾಪಟ್ಟಿಯನ್ನು ಕರಾರುವಕ್ಕುಗೊಳಿಸಲಾಗುವುದು.

ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುವುದು. ಸರಕು, ಸಾಗಾಣಿಕೆ ಮಾರ್ಗದಲ್ಲೂ ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ನಿರ್ಮಿಸಲಾಗುವುದು. ಸೆಮಿ ಹೈಸ್ಪೀಡ್‍ನ ಗೋಲ್ಡನ್ ಕ್ವಾಟ್ರಲೇಟ್ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಇಲಾಖೆಯನ್ನು ಇನ್ನಷ್ಟು ಉನ್ನತೀಕರಿಸುವುದಾಗಿ ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin