ರೈಲ್ವೆ ಇಲಾಖೆಯಲ್ಲಿ 62907 ‘ಡಿ’ ಗ್ರೂಪ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

rail

ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಪ್ರಾಧಿಕಾರ (ಆರ್.ಆರ್.ಬಿ) ದ ಮುಖಾಂತರ ‘ಡಿ’ ಗ್ರೂಪ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 62907
ನೈರುತ್ಯ ರೈಲ್ವೆ ವಿಭಾಗ : ಇಲಾಖೆಯಲ್ಲಿನ 62907 ಹುದ್ದೆಗಳ ಪೈಕಿ ಬೆಂಗಳೂರು ಆರ್.ಆರ್.ಬಿಯಲ್ಲಿ 2293 ಹುದ್ದೆಗಳು ಲಭ್ಯವಿವೆ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಜೊತೆಗೆ ಎನ್.ಸಿ.ವಿ.ಟಿಯ ಎನ್.ಎ.ಸಿ ಕೋರ್ಸ ಮಾಡಿರಬೇಕು. ಅಥವಾ 10ನೇ ತರಗತಿ ಉತ್ತೀರ್ಣದ ಜೊತೆಗೆ ಎನ್.ಸಿ.ವಿ.ಟಿಯಿಂದ ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಯಿಂದ ಐಟಿಐ ಮಾಡಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 31 ವರ್ಷ ನಿಗದಿ ಮಾಡಲಾಗಿದ್ದು, ಪ.ಜಾ, ಪ.ಪಂ 5 ವರ್ಷ, ಹಿಂದುಳಿದ ವರ್ಗದವರಿಗೆ 3 ವರ್ಷ, ವಿಕಲಚೇತನರಿಗೆ 10 ವರ್ಷದಷ್ಟು ಸಡಿಲತೆ ನೀಡಲಾಗಿದೆ.
ಶುಲ್ಕ : ಪ.ಜಾ, ಪ.ಪಂ, ಮಾಜಿ ನೌಕರರು, ಪಿಡಬ್ಲ್ಯೂಡಿ, ಮಹಿಳೆ, ಅಲ್ಪಸಂಖ್ಯಾತರು, ಆರ್ಥಿಕ ದುರ್ಬಲರಿಗೆ 250 ರೂ, ಇತರರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-03-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್  http://www.rrbahmedabad.gov.in  ಗೆ ಭೇಟಿ ನೀಡಿ.

ಬೆಂಗಳೂರು ವಿಭಾಗದವರು ವೆಬ್ ಸೈಟ್ www.rrbbnc.gov.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin