ರೈಲ್ವೆ ನಿಲ್ದಾಣದ ಬಳಿ ‘ಮರಿ ಟೈಗರ್’ ಓಡಾಟ

ಈ ಸುದ್ದಿಯನ್ನು ಶೇರ್ ಮಾಡಿ

Mari-Tiger-1

ವಿನೋದ್ ಪ್ರಭಾಕರ್ ನಟನೆಯ ಮರಿ ಟೈಗರ್ ಚಿತ್ರಕ್ಕೆ ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಸುಮಾರು ಹದಿನೈದು ದಿನಗಳ ಚಿತ್ರೀಕರಣ ನಡೆದಿದೆ. ರೈಲ್ವೆ ಬೋಗಿ ಹಾಗೂ ನಿಲ್ದಾಣದ ಸುತ್ತಮುತ್ತ ಸಾಹಸ ಸನ್ನಿವೇಶ, ಪ್ರೀತಿಯ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ವಿನೋದ್ ಪ್ರಭಾಕರ್, ತೇಜು, ಪೆಟ್ರೋಲ್ ಪ್ರಸನ್ನ, ಮಾ||ಋತ್ವಿಕ್, ಕಾಟ್‍ರಾಜ, ಮನೋಜ್ ಭರತ್, ಬುಲೆಟ್ ಪ್ರಕಾಶ್ ಹಾಗೂ ಸುಮಾರು 25ಕ್ಕೂ ಹೆಚ್ಚು ಸಾಹಸ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಐದು ಕ್ಯಾಮೆರಾಗಳನ್ನು ಬಳಸಿ ಈ ಚಿತ್ರೀಕರಣ ನಡೆಸಿರುವುದು ವಿಶೇಷ. ಒಂದು ವಾರದ ಚಿತ್ರೀಕರಣ ಬಾಕಿಯಿದ್ದು , ನವೆಂಬರ್‍ನಲ್ಲಿ ಚಿತ್ರೀಕರಣ ನಡೆಯಲಿದೆ.

ನಂದ ಲವ್ಸ್ ನಂದಿತಾ, ಭಾಗ್ಯದ ಬಳೆಗಾರ ಚಿತ್ರಗಳನ್ನು ರಮೇಶ್ ಕಶ್ಯಪ್ ನಿರ್ಮಾಪಕರಾಗಿರುವ ಈ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಕ್ಕೆ ಚಿಂಗಾರಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಎರಡನೇ ನಾಯಕಿಯಾಗಿದ್ದ ತೇಜು ನಾಯಕಿಯಾಗಿದ್ದಾರೆ. ಅಜಯ್ ಕುಮಾರ್ ಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್‍ರ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

Mari-Tiger-2

Mari-Tiger-3

 

► Follow us on –  Facebook / Twitter  / Google+

Facebook Comments

Sri Raghav

Admin