ರೈಲ್ವೆ ಲೆಕ್ಕಪತ್ರದಲ್ಲಿ 66 ಲೋಪ-ದೋಷ , 1,431 ಕೋಟಿ ರೂ.ತಪ್ಪು ಲೆಕ್ಕಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

Indian-Railway--01

ನವದೆಹಲಿ, ಮಾ.12- ರೈಲ್ವ ಇಲಾಖೆ ಲೆಕ್ಕಪತ್ರಗಳಲ್ಲಿ ಭಾರೀ ಲೋಪದೋಷಗಳು ಕಂಡುಬಂದಿದ್ದು, 1,431 ಕೋಟಿ ರೂ.ಗಳಷ್ಟು ತಪ್ಪು ಲೆಕ್ಕಚಾರ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ದೇಶದ ಅತ್ಯುನ್ನತ ಲೆಕ್ಕಪರಿಶೋಧಕರಾದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (ಮಹಾಲೇಖಪಾಲರು) ಅವರಿಂದ ಹಿಡಿದ್ದು ಲೆಕ್ಕಪತ್ರ ವಿಭಾಗದ ಅಕೌಂಟೆಂಟ್ ತನಕ ಸಂಬಂಧಪಟ್ಟವರೆಲ್ಲರ ಪಾಲೂ ಈ ಪ್ರಮಾದದಲ್ಲಿದೆ.  ಲೆಕ್ಕಪತ್ರದಲ್ಲಿನ ಈ ಪ್ರಮಾದವನ್ನು ಮೇಲಿನಿಂದ ಕೆಳಹಂತದವರೆಗೆ ನಡೆದಿರುವುದನ್ನು ಮನಗಂಡು ಸರಿಪಡಿಸಿಕೊಳ್ಳುವಂತೆ ಮಹಾ ಲೇಖಪಾಲರು ರೈಲ್ವೆ ಇಲಾಖೆಗೆ ಸೂಚನೆ ನೀಡಿದ್ದಾರೆ.

2010-11 ರಿಂದ 2014-15ರ ಐದು ವರ್ಷಗಳ ಅವಧಿಯಲ್ಲಿ 11 ವಲಯಗಳ 66 ಪ್ರಕರಣಗಳಲ್ಲಿ 1,431.05 ಕೋಟಿ ರೂ. ಮೊತ್ತದ ಅಸಮರ್ಪಕ ಹೊಂದಾಣಿಕೆಗಳನ್ನು ಲೆಕ್ಕಪರೀಶೋಧಕರು ಪತ್ತೆ ಮಾಡಿ ರೈಲ್ವೆ ಇಲಾಖೆಗೆ ತಿಳಿಸಿದ್ದರು. ಅಲ್ಲದೇ 53.47 ಕೋಟಿ ರೂ. ಮೊತ್ತದ ಖರ್ಚುಗಳನ್ನು ತಪ್ಪಾಗಿ ಲೆಕ್ಕಚಾರ ಮಾಡಲಾಗಿರುವುದನ್ನು ಲೆಕ್ಕಪತ್ರ ಶೋಧನೆಯಲ್ಲಿ ಸಿಎಜಿ ಗಮನಕ್ಕೆ ಬಂದಿತ್ತು. ಈ ಲೋಪದೋಷಗಳನ್ನು ರೈಲ್ವೆ ಇಲಾಖೆ ಒಪ್ಪಿಕೊಂಡಿತ್ತು.
ಅಚ್ಚರಿ ಸಂಗತಿ ಎಂದರೆ ಕಳೆದ ಐದು ವರ್ಷದ ಅವಧಿಯಲ್ಲಿ ಮಹಾಲೇಖ ಪಾಲರ ಕಚೇರಿಯಿಂದಲೇ ಈ ಎದ್ದು ಕಾಣುವ ಪ್ರಮಾದಗಳಿಗೆ ಹಸಿರು ನಿಶಾನೆ ತೋರಲಾಗಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಾಗಿ ರೈಲ್ವೆ ಇಲಾಖೆ ಪುನರಾವರ್ತಿತ ಭರವಸೆಗಳನ್ನು ನೀಡಿದ್ದರೂ. ರೈಲ್ವೆ ಲೆಕ್ಕಪತ್ರಗಳಲ್ಲಿ ಅಪವರ್ಗೀಕರಣದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಲೆಕ್ಕಪರಿಶೋಧನೆಯಲ್ಲೂ ಮತ್ತೆ ಮತ್ತೆ ಕಂಡುಬಂದಿರುವ ರೈಲ್ವೆ ಇಲಾಖೆಯ ಲೆಕ್ಕಪತ್ರಗಳ ಲೋಪದೋಷಗಳನ್ನು ಉಲ್ಲೇಖೀಸಿ ಸಿಎಜಿ ಇತ್ತೀಚಿನ ತನ್ನ ವರದಿಯಲ್ಲಿ ಪ್ರಮಾದಗಳನ್ನು ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin