ರೈಲ್ವೆ ಸೇಫ್ಟಿಗಾರ್ಡ್ ಕಂಬಕ್ಕೆ ಬಸ್ ಡಿಕ್ಕಿ : ಚಾಲಕನಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

rail
ಬೆಂಗಳೂರು, ಅ.7- ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರೈಲ್ವೆ ಸೇಫ್ಟಿಗಾರ್ಡ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬೆಂಗಳೂರಿಗೆ ಬಂದ ಖಾಸಗಿ ಬಸ್ ಮೆಜೆಸ್ಟಿಕ್‍ನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಸ್ ಬಸ್ ನಿಲುಗಡೆ ಮಾಡಲು ಚಾಮರಾಜಪೇಟೆ ಕಡೆಗೆ ಹೋಗುತ್ತಿತ್ತು.
ಬೆಳಗ್ಗೆ 7 ಗಂಟೆಯಲ್ಲಿ ಓಕಳಿಪುರ ಸಮೀಪದ ವಾಟಾಳ್ ನಾಗರಾಜ್ ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ನಿಯಂತ್ರಣ ತಪ್ಪಿ ರೈಲ್ವೆ ಸೇಫ್ಟಿ ಗಾರ್ಡ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಬಸ್‍ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಪ್ರಕಾಶ್ ಗಾಯಗೊಂಡರು.ತಕ್ಷಣ ಸ್ಥಳೀಯರು ಗಾಯಾಳು ಪ್ರಕಾಶ್‍ನನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಸಂಬಂಧ ಕೆಲ ಕಾಲ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಲ್ಲೇಶ್ವರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin