ರೈಲ್ವೆ ಹಳಿ ಬಳಿ ವ್ಯಕ್ತಿ ಶವ ಪತ್ತೆ
ಈ ಸುದ್ದಿಯನ್ನು ಶೇರ್ ಮಾಡಿ
ಮಂಗಳೂರು, ಸೆ.20- ಇಲ್ಲಿನ ಮಹಾಕಾಳಿ ಪಡ್ಡು ರೈಲ್ವೆ ಹಳಿ ಬಳಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಆಗಾಗ ರೈಲ್ವೆ ಹಳಿ ಜಾಗಗಳಲ್ಲಿ ಶವಗಳು ಪತ್ತೆಯಾಗುತ್ತಿದ್ದರೂ ಯಾರು, ಏನು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಟ್ಟರೂ ಪ್ರಕರಣ ಭೇದಿಸಲು ವಿಫಲರಾಗುತ್ತಿದ್ದಾರೆ. ದುಷ್ಕರ್ಮಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
► Follow us on – Facebook / Twitter / Google+
Facebook Comments