ರೋಮಾಂಚನಗೊಳಿಸಿದ ಹುಲಿಕಲ್ ನಟರಾಜ್‍ರ ಪವಾಡ ಬಯಲು ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

hulikal--nataraj

ಕನಕಪುರ, ಅ.18-ತಾಲ್ಲೂಕಿನ ಹಾರೋಹಳ್ಳಿ ಬಸ್ ನಿಲ್ದಾಣದ ವೃತ್ತದಲ್ಲಿ ರಾಮನಗರ ಜಿಲ್ಲಾ ದಲಿತಸೇನೆ ಆಯೋಜಿಸಿದ್ದ ಮೂಢನಂಬಿಕೆಗಳ ಪವಾಡ ಬಯಲು ಕಾರ್ಯಕ್ರಮವು ವೈಜ್ಞಾನಿಕ ಚಿಂತಕ ಹಾಗು ರಾಷ್ಟ್ರಪ್ರಶಸ್ತಿ ಪುರಸ್ಕøತ ಹುಲಿಕಲ್‍ನಟರಾಜ್‍ರವರ ಪ್ರದರ್ಶನವು ಗ್ರಾಮಸ್ಥರನ್ನು ರೋಮಾಂಚನಗೊಳಿಸುವಂತೆ ಮಾಡಿತು.ಇಂದಿನ ದಿನಗಳಲ್ಲಿ ಭ್ರಷ್ಟ ಮನಸ್ಸುಗಳು ಅಧಿಕವಾಗುತ್ತಿದ್ದು ಮನುಷ್ಯನ ದುರಾಸೆಯಿಂದ ಮಾನವೀಯ ಮೌಲ್ಯಗಳೂ ಕಣ್ಮರೆಯಾಗುತ್ತಿವೆ. ಇಂದು ಮೌಢ್ಯವು ದೊಡ್ಡಮಟ್ಟದಲ್ಲಿ ಕ್ಯಾನ್ಸರ್‍ನಂತೆ ಬೆಳೆಯುತ್ತಿದ್ದು ಸಮಾಜದಲ್ಲಿ ನಾವು ಸಾಮಾಜಿಕ, ಪ್ರಾಕೃತಿಕ ಹಾಗು ಆಧ್ಯಾತ್ಮಿಕ ಜ್ಞಾನವಿಲ್ಲದೆ ಮಾನವೀಯ ಮೌಲ್ಯಗಳು ಕುಸಿದು ವ್ಯಕ್ತಿಹೀನರಾಗುತ್ತಿರುವುದರಿಂದ ಸಮಾಜದಲ್ಲಿ ಮೌಢ್ಯ ತಾಂಡವವಾಡುತ್ತಿದೆ. ಮೌಢ್ಯಗಳ ಅಟ್ಟಹಾಸ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ ಎಂದು ನಟರಾಜ್ ಹೇಳಿದರು.

ದಲಿತ ಸೇನೆಯ ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಉಮೇಶ್, ಜಿಲ್ಲಾಧ್ಯಕ್ಷ ಅಶೋಕ್‍ಕುಮಾರ್ ಮಾತನಾಡಿ ಚೈತನ್ಯ ಹಾಗು ಕ್ರಿಯಾಶೀಲತೆಯ ಕೊರತೆಯಿಂದ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಎಲ್ಲೆಡೆ ಮೌಢ್ಯ, ಮೂಢನಂಬಿಕೆ ಹೆಚ್ಚಾಗುತ್ತಿರುವುದರಿಂದ ಸಮಾಜವನ್ನು ದಿಕ್ಕುತಪ್ಪಿಸುವಂತಾಗುತ್ತಿದೆ ಎಂದರು.ಪವಾಡ ಬಯಲು ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಹುಲಿಕಲ್ ನಟರಾಜ್‍ರವರು ಮುಳ್ಳಿನ ಮೇಲೆ ಮಲಗುವುದು, ಗಾಜಿನ ತುಂಡುಗಳ ಮೇಲೆ ಕುಣಿಯುವುದು, ಬಿಸಿ ಎಣ್ಣೆಯಲ್ಲಿ ಕೈಹಾಕುವುದು, ಜನ್ಮಾಂತರ, ಪುರೋಹಿತಷಾಹಿ, ಚಿಕಿತ್ಸೆಯಿಲ್ಲದೆ ಆಪರೇಷನ್ ಮಾಡುವಂತಹ ಅನೇಕ ಪ್ರದರ್ಶನಗಳನ್ನು ನೀಡಿ ಜನರನ್ನು ಹುಬ್ಬೇರಿಸುವಂತೆ ಮಾಡುವ ಮೂಲಕ ಮೂಢನಂಬಿಕೆಗಳಿಂದ ದೂರವಿರುವಂತೆ ಸಾರಿದರು.ಸರ್ಕಾರಿ ವೈದ್ಯರಾದ ಡಾ.ಸುರೇಶ್‍ಕೃಷ್ಣ, ಬೆಟ್ಟಹಳ್ಳಿ ಕಾವಲ್ ಶಂಕರ್, ಜಿಲ್ಲಾ ಪದಾಧಿಕಾರಿಗಳಾದ ಚಂದ್ರು, ಕೃಷ್ಣಪ್ಪ, ಸತ್ಯಮೂರ್ತಿ, ಮಾಗಡಿ ಅಧ್ಯಕ್ಷ ಲಕ್ಷ್ಮಿನರಸಿಂಹ, ವೈರಮುಡಿ, ಕೆಂಪರಾಜು, ಅರುಣ್ ಹಲವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin