ರೋಸ್ ವ್ಯಾಲಿ ಚಿಟ್ ಫಂಡ್ ಹಗರಣ : ಮತ್ತೊಬ್ಬ ಟಿಎಂಸಿ ಸಂಸದ ಅರೆಸ್ಟ್, ಮಮತಾ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

Mamatha

ಕೋಲ್ಕತಾ ಜ. 03 : ಬಹುಕೋಟಿ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಸಿಬಿಐ ಬಂಧಿಸಿದ್ದಾರೆ. ಕೋಲ್ಕತಾದಲ್ಲಿ ಇಂದು ಬಂಡೋಪಾಧ್ಯಾಯ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ನಡೆಸಿ ನಂತರ ಬಂಧಿಸಿದರು. ರೋಸ್ ವ್ಯಾಲಿ ಹಗರಣದ ಸಂಬಂಧ ಕಳೆದ ವಾರವಷ್ಟೇ ಟಿಎಂಸಿಯ ಸಂಸದ ತಪಾಸ್ ಪಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಇದೀಗ ಟಿಎಂಸಿ 2ನೇಯ ಸಂಸದನ ಬಂಧನವಾದಂತಾಗಿದೆ. ಹಗರಣದ ಹೆಸರಲ್ಲಿ ಪಕ್ಷದ ಸಂಸದರನ್ನು ಬಂಧಿಸುತ್ತಿರುವುದಾಗಿ ಟಿಎಂಸಿ ನಾಯಕಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಡೋಪಾಧ್ಯಾಯ ಬಂಧನದಿಂದ ಕೆರಳಿರುವ ಟಿಎಂಸಿ ಕಾರ್ಯಕರ್ತರು ಕೋಲ್ಕತಾದಲ್ಲಿನ ಬಿಜೆಪಿ ಕೇಂದ್ರ ಕಚೇರಿಗೆ ನುಗ್ಗಿ ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿರುವ ಮಮತಾ ನೋಟ್ ಬ್ಯಾನ್ ಹಗರಣದ ವಿರುದ್ಧ ದ್ವನಿ ಎತ್ತಿದವರನ್ನು CBI, ED, IT ಅಧಿಕಾರಿಗಳ ಮೂಲಕ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸದನ ಬಂಧನದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಮಮತಾ ನಮ್ಮೆಲ್ಲರನ್ನೂ ಬಂಧಿಸಿ ಆದರೆ, ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin