ರೌಡಿಶೀಟರ್ ಪರ ಶಾಸಕರ ಬ್ಯಾಟಿಂಗ್ : FIR ದಾಖಲಿಸದಂತೆ ಪೊಲೀಸರಿಗೆ ಧಮ್ಕಿ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ನ.12- ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಸಂಭಯ್ಯನ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡದಂತೆ ಶಾಸಕರೊಬ್ಬರು ಪೊಲೀಸರಿಗೆ ಧಮ್ಕಿ ಹಾಕಿರುವ ಪ್ರಕರಣ ಕೇಳಿ ಬಂದಿದೆ.  ಸಂಭಯ್ಯನ ಅಕ್ಕನ ಮಗಳನ್ನು ಮುಂಚೇನಹಳ್ಳಿ ನಿವಾಸಿ ರಂಜಿತ್ ಕುಮಾರ್ ಎಂಬುವರು (27) ಪ್ರೀತಿಸುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದನೆಂದು ಹೇಳಲಾಗಿದ್ದು, ಈ ಹಿಂಸೆಯನ್ನು ಸಹಿಸಲಾರದೆ ಅವಮಾನಗೊಂಡು ನೊಂದಿದ್ದ ರಂಜಿತ್ ಕುಮಾರ್ ಅ.15ರಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಭಯ್ಯನ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಿಕೊಳ್ಳಬಾರದು ಎಂದು ಅತ್ತಿಬೆಲೆ ಪಿಎಸ್‍ಐ ಶ್ರೀನಿವಾಸ್ ಅವರಿಗೆ ಶಾಸಕರೊಬ್ಬರು ಕರೆ ಮಾಡಿ, ಅವರು ನಮ್ಮ ಹುಡುಗರು ಯಾವುದೇ ಪ್ರಕರಣ ದಾಖಲಿಸಬಾರದು ಎಂದು ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ಪಿಂಗ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆ ಶಾಸಕರ ಮಾತನ್ನು ಲೆಕ್ಕಿಸದೆ ಪ್ರಕರಣ ದಾಖಲಿಸಿದ್ದ ಪಿಎಸ್‍ಐ ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin