ರೌಡಿ ಕಾಲಿಯಾ ರಫಿಕ್ ಕೊಲೆ ಪ್ರಕರಣ : ನೂರ್‍ಅಲಿ ಸೇರಿ ನಾಲ್ವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Mangaluru-Murder-01

ಮಂಗಳೂರು, ಫೆ.18- ಉಪ್ಪಳದ ರೌಡಿ ಕಾಲಿಯಾ ರಫಿಕ್ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನೂರ್‍ಅಲಿ, ಪದ್ಮನಾಭ, ರವೂಫ್, ರಶೀದ್ ಬಂಧಿತರು.
ಉಳ್ಳಾಲ, ಕಾಸರಗೋಡು ಹಾಗೂ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ 2 ಪಿಸ್ತೂಲ್, 2 ರಿವಾಲ್ವರ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಫೆ.16ರ ತಡರಾತ್ರಿ ಒಂದು ಗಂಟೆಯಲ್ಲಿ ಮಂಗಳೂರಿಗೆ ಬರುತ್ತಿದ್ದ ರಫಿಕ್‍ನನ್ನು ಮತ್ತೊಬ್ಬ ರೌಡಿ ನೂರ್‍ಅಲಿ ತನ್ನ ಸಹಚರರ ಜತೆ ಉಳ್ಳಾಲ ನಗರದಲ್ಲಿ ಟ್ರ್ಯಾಕ್ಟರ್‍ನಿಂದ ಡಿಕ್ಕಿ ಹೊಡೆದು ಅಡ್ಡಗಟ್ಟಿ ಕೊಲೆ ಮಾಡಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin